Mahalakshmi Murder Case:(ಸೆ.26) ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮೀ ಎಂಬಾಕೆಯನ್ನು ಶವ ತುಂಡು ತುಂಡಾಗಿ ಬರ್ಬರವಾಗಿ ಹತ್ಯೆ ಮಾಡಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು.
ಇದನ್ನೂ ಓದಿ: 🔴ಬೆಳ್ತಂಗಡಿ : ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಪತ್ತೆ ಮಾಡಲು ಹೊರ ರಾಜ್ಯಕ್ಕೆಂದು ಹೋದ ಪೊಲೀಸರಿಗೆ ಆತ ಆತ್ಮಹತ್ಯೆ ಮಾಡಿರುವ ವಿಚಾರ ತಿಳಿದು ಬಂದಿದ್ದು, ಜೊತೆಗೆ ಒಂದು ಡೆತ್ ನೋಟ್ ಪತ್ತೆಯಾಗಿದೆ.
ಡೆತ್‌ನೋಟಲ್ಲಿ ತಾನೇ ಕೊಲೆ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ. ಯಾಕೆ ಮಾಡಿದ? ಯಾವ ರೀತಿ ಕೊಲೆ ಮಾಡಿದ ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಹೇಳಿರುವ ಕುರಿತು ವರದಿಯಾಗಿದೆ.
ಆರೋಪಿ ಮುಕ್ತಿರಂಜನ್ ದಾಸ್ ಮಾಲ್‌ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದು, ಈತ ಒರಿಸ್ಸಾಗೆ ಹೋಗಿರೋ ಮಾಹಿತಿ ದೊರಕಿತ್ತು. ಪೊಲೀಸರು ಅಲ್ಲಿಗೆ ಹೋದಾಗ ಮುಕ್ತಿ ರಂಜನ್ ರಾಯ್ ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಬಳಿ ದೊರಕಿರುವ ಡೈರಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.
ಡೆತ್‌ನೋಟಿನಲ್ಲಿ ಏನಿದೆ?
ಸೆ.3 ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ. ಸೆ.3 ರಂದು ಆಕೆಯ ಮನೆಗೆ ಹೋಗಿದ್ದು, ಕೃತ್ಯ ಎಸಗಿದ್ದು, ವೈಯಕ್ತಿಕ ವಿಚಾರಗಳಿಗೆ ಆಕೆಯ ಜೊತೆ ಜಗಳವಾಯಿತು.
ಆಗ ಆಕೆ ಹಲ್ಲೆ ಮಾಡಿದ್ದು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಮಾಡಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಕೊಲೆ ಮಾಡಲು ಕಾರಣವೇನೆಂಬುವುದನ್ನು ರಂಜನ್ ಬಹಿರಂಗಪಡಿಸಿದ್ದಾನೆ.
ರಂಜನ್ ಮೊದಲು ಮಹಾಲಕ್ಷ್ಮಿಯನ್ನು ಉಸಿರುಗಟ್ಟಿಸಿದ್ದು, ಕೊಲೆ ಮಾಡಿದ್ದು ಆಕೆಯನ್ನು ಹ್ಯಾಕ್ಸಲ್ ಬ್ಲೇಡ್‌ನಿಂದ ಕತ್ತರಿಸಿದ್ದ. ಆಕೆಯ ಶವವನ್ನು ಪೀಸ್ ಪೀಸ್ ಮಾಡಿ ನಂತರ ಫ್ರಿಡ್ಜ್‌ನಲ್ಲಿ ತುಂಬಿಸಿದ್ದ. ಸಾಕ್ಷಿ ನಾಶಪಡಿಸಲೆಂದು ಬಾತ್‌ರೂಂನಲ್ಲಿ ಆಸಿಡ್ ಹಾಕಿ ಕ್ಲೀನ್ ಮಾಡಿದ್ದ ಎಂದು ತಿಳಿದು ಬಂದಿದೆ.
ಒರಿಸ್ಸಾದ ಫಂಡಿ ಗ್ರಾಮದ ನಿವಾಸಿಯಾಗಿರುವ ರಂಜನ್ ಮೊನ್ನೆ ಬೆಳಿಗ್ಗೆ ಮನೆಗೆ ಬಂದಿದು, ಕೆಲ ಕಾಲ ಮನೆಯಲ್ಲಿ ಇದ್ದಿದ್ದು, ರಾತ್ರಿ ಸ್ಕೂಟಿ ಹತ್ತಿ ಹೊರಗಡೆ ಹೋಗಿದ್ದ.
ಈ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಸಮೇತ ಹೋದ ಆತ ಬಳಿಕ ಎಲ್ಲಿ ಹೋಗಿದ್ದ ಎಂದು ಯಾರಿಗೂ ಗೊತ್ತಿರಲಿಲ್ಲವಂತೆ. ನಿನ್ನೆ ಕುಳೆಪಾದ ಎಂಬ ಸ್ಮಶಾನದಲ್ಲಿ ಆತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು.
ಈ ಕುರಿತು ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಸಂಬಂಧ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಬೆಂಗಳೂರು ಪೊಲೀಸರು ಒರಿಸ್ಸಾಗಿ ಹೋಗಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.