Wed. Nov 20th, 2024

Aarsha Vidya Samajam: ಮತಾಂತರಗೊಂಡ 8,000ಕ್ಕೂ ಅಧಿಕ ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಕೇರಳದ “ಆರ್ಷ ವಿದ್ಯಾ ಸಮಾಜಂ” ಸಂಸ್ಥೆಗೆ ಶೃಂಗೇರಿ ಶ್ರೀಗಳಿಂದ 50 ಲಕ್ಷ ರೂ. ದೇಣಿಗೆ

Aarsha Vidya Samajam: (ಸೆ.26) ಕೇರಳದಲ್ಲಿ ಮತಾಂತರಗೊಂಡಿರುವ ಸುಮಾರು 8,000ಕ್ಕೂ ಹೆಚ್ಚು ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯ ಮಾಡುತ್ತಿರುವ “ಆರ್ಷ ವಿದ್ಯಾ ಸಮಾಜಂ” ಗೆ ಶೃಂಗೇರಿ ಮಠದಿಂದ ರೂ. 50 ಲಕ್ಷ ದೇಣಿಗೆ ನೀಡಲಾಗಿದೆ.

ಇದನ್ನೂ ಓದಿ: 💥ಮಂಗಳೂರು: ಪಾನಿಪುರಿ ತಿನ್ನುತ್ತಾ ಮೊಬೈಲ್‌ ಎಗರಿಸಿದ ಖತರ್ನಾಕ್‌ ಕಳ್ಳ

ಈ ಸಂಸ್ಥೆ ನಡೆಸಿದ ಕಾರ್ಯಗಳನ್ನು ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಗೆ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಅವರು ವಿವರಿಸಿದರು.

ಧನ ಸಹಾಯ ನೀಡಿ ಧರ್ಮ ಸಂರಕ್ಷಣಾ ಕಾರ್ಯಕ್ಕೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ಸಂಸ್ಥೆಯ ಮುಖ್ಯಸ್ಥೆ ಶೃತಿಯವರಿಗೆ ಸ್ವಾಮೀಜಿ ಚೆಕ್‌ ವಿತರಿಸಿದರು.

ಈ ವೇಳೆ ಅಂಬಿಕಾ ವಿದ್ಯಾ ಸಂಸ್ಥೆಯ ಸುಬ್ರಹ್ಮಣ್ಯ ನಟ್ಟೋಜ, ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.

ಆರ್ಷ ವಿದ್ಯಾ ಸಮಾಜಂ ಕೇರಳದ ತಿರುವನಂತಪುರಂ ಮೂಲದ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದ್ದು, ಸನಾತನ ಧರ್ಮದ ಪಂಚ ಕರ್ತವ್ಯಗಳ ವ್ಯವಸ್ಥಿತ ಮತ್ತು ವೈಜ್ಞಾನಿಕ ನೆರವೇರಿಕೆಗಾಗಿ ಅಧ್ಯಯನ, ಅನುಷ್ಠಾನ, ಪ್ರಚಾರ, ಅಧ್ಯಾಪನ, ಸಂರಕ್ಷಣೆ ಇದು ಗುರು ಪರಂಪರೆಯಲ್ಲಿ ಕಲಿಕೆಯ ವಿಧಾನಕ್ಕೆ ಒತ್ತು ನೀಡುತ್ತದೆ.


ಸಮಾನಾಂತರವಾಗಿ ಎವಿಎಸ್‌ ದಬ್ಬಾಳಿಕೆ ಮತ್ತು ಕುಶಲತೆಯ ಮೂಲಕ ಸಾಧಿಸಿದ ಧಾರ್ಮಿಕ ಮತಾಂತರಗಳ ವಿರುದ್ಧ ಹೋರಾಡಲು ಪಟ್ಟು ಬಿಡದೆ ಕೆಲಸ ಮಾಡುತ್ತಿದೆ.

ಇದು ರಾಷ್ಟ್ರ ಮತ್ತು ಪ್ರಪಂಚದ ಸಾಮರಸ್ಯ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಮುಲಭೂತೀಕರಣಕ್ಕೆ ಕಾರಣವಾಗುತ್ತದೆ ಮತ್ತು ಅಂತಹ ಜನರನ್ನು ಸನಾತನ ಧರ್ಮಕ್ಕೆ ಮರಳಿ ತರುವ ಉದ್ದೇಶ ಈ ಸಂಸ್ಥೆಯದಾಗಿದೆ.

Leave a Reply

Your email address will not be published. Required fields are marked *