ಪುತ್ತೂರು:(ಸೆ.27) ಪುತ್ತೂರು ನಗರ ಸಭೆಯ ನಿರ್ಲಕ್ಷ್ಯದಿಂದಾಗಿ ಮೀನು ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ಯು ಪ್ಲಸ್ ನ್ಯೂಸ್ ವರದಿ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ದೌಡಾಯಿಸಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: 💠ಬೆಳ್ತಂಗಡಿ: ಎಸ್ ಬಿ ಐ ಲೈಫ್ ಇನ್ಶೂರೆನ್ಸ್ ನಿಂದ ವಿಮಾ ಪರಿಹಾರ
ನಗರಸಭಾ ಅಧಿಕಾರಿಗಳು ಮೀನಿನ ಮಾರುಕಟ್ಟೆಗೆ ಆಗಮಿಸಿ ಅಲ್ಲಿನ ವಸ್ತು ಸ್ಥಿತಿಯನ್ನ ಗಮನಿಸಿದ್ದಾರೆ.
ಬಳಿಕ ಗ್ರಾಹಕರಿಗೆ ಬರಲು ತೊಂದರೆಯಾಗುತ್ತಿದ್ದ ಮೀನಿನ ಬಾಕ್ಸ್‌ಗಳನ್ನ ಒಳಗಿಡುವಂತೆ ಮೀನು ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.
ರಸ್ತೆಯಲ್ಲಿ ಯಾವುದೇ ಮೀನಿನ ಬಾಕ್ಸ್ ಗಳನ್ನ ಇಡಬಾರದು ಎಂದು ಸೂಚನೆ ನೀಡಿದ್ದಾರೆ.
ಇಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ಅದಷ್ಟು ಶುಚಿತ್ವವನ್ನ ಕಾಪಾಡಿ ಎಂದು ಹೇಳಿದ್ದಾರೆ.
ಕಿತ್ತೆದ್ದು ಬಂದಿರುವ ಸ್ಲ್ಯಾಬ್ ಗಳನ್ನ ಸರಿಪಡಿಸುತ್ತೇವೆ. ಸರಿಯಾಗಿ ಚರಂಡಿ ನೀರು ಹೋಗಲು ವ್ಯವಸ್ಥೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಖ್ಯ ರಸ್ತೆಗೆ ನೀರು ಹೋಗದಂತೆ ಆದಷ್ಟು ಶೀಘ್ರವಾಗಿ ಸರಿಪಡಿಸುತ್ತೇವೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.