Wed. Nov 20th, 2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಸಿದ್ಧ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:23 ರಿಂದ 10:53, ಯಮಘಂಡ ಕಾಲ ಮಧ್ಯಾಹ್ನ 01:53ರಿಂದ ಸಂಜೆ 03:23ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:23 ರಿಂದ 07:53 ರ ವರೆಗೆ.

ಮೇಷ ರಾಶಿ : ಇನ್ನೊಬ್ಬರನ್ನು ನೋಡಿ ಬದುಕುವುದಕ್ಕಿಂತ ನಿಮ್ಮನ್ನೇ ನೋಡಿದರೆ ಒಳ್ಳೆಯದು.ಕೆಲಸದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ದಾರಿ ಅಗಲವಿದೆ ಎಂದು ಹೇಗಾದರೂ ಹೋದರೆ ಬೀಳುವುದು ನೀವೇ. ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕಿ ಕೆಲಸದಲ್ಲಿ ಉತ್ಸಾಹವು ಇರಲಿದೆ. ಖಾಸಗಿ ಉದ್ಯೋಗಿಗೆ ಮುಖ್ಯಸ್ಥರಿಂದ ಕಿರಿಕಿರಿ ಆಗಬಹುದು.

ವೃಷಭ ರಾಶಿ : ನಿಮ್ಮ ಅಸತ್ಯಗಳನ್ನು ಜನರು ಎಂದಿನಂತೆ ನಂಬಲಾರರು.ಕುಟುಂಬದ ಜೊತೆ ಸಮಯವನ್ನು ಕಳೆದುದಕ್ಕೆ ಮನಸ್ಸು ನೆಮ್ಮದಿಯಿಂದ ಇರಲಿದೆ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ಆರ್ಥಿಕತೆಯು ಉತ್ತಮವಾದಂತೆ ಅನ್ನಿಸುವುದು.

ಮಿಥುನ ರಾಶಿ : ಸ್ಪರ್ಧಾತ್ಮಕವಾಗಿ ನೀವು ಗೆಲ್ಲಬೇಕು ಎನ್ನುವ ಹಂಬಲವಿರುವುದು. ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ಶತ್ರುಗಳ ಕಾಟವನ್ನು ಕಡಿಮೆ‌ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು.‌

ಕರ್ಕಾಟಕ ರಾಶಿ : ಯಾರಿಂದಲೂ ನಿಮಗೆ ಸುಲಭವಾಗಿ ಮೆಚ್ಚುಗೆ ಸಿಗದು. ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಒಂದು ಕಡೆ ಹಣದ ವ್ಯವಹಾರವನ್ನು ಮುಕ್ತಾಯ ಮಾಡಿದರೆ ಮತ್ತೊಂದು ಕಡೆಗೆ ತೆರೆದುಕೊಳ್ಳುವುದು. ಸಂಗಾತಿಯ ಒತ್ತಾಯದ ಮೇರೆಗೆ ಹೊಸ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡುವಿರಿ. ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿದ್ದು ಗಂಭೀರವಾಗಿ ಇದನ್ನು ಪರಿಗಣಿಸಬೇಕಾದೀತು.

ಸಿಂಹ ರಾಶಿ : ಇಂದು ನಿಮಗೆ ಸಕಾಲಕ್ಕೆ ಸಿಗುವ ಸಹಾಯದಿಂದ ಸಂತೋಷವಾಗವುದು. ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಸಾಮಾಜಿಕ ಗೌರವವು ನಿಮಗೆ ಸಿಗಲಿದ್ದು ಇದರಿಂದ ಅಹಂಕಾರವೂ ಬರಬಹುದು. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವುದು ಸರಿಯಾಗದು. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರಲಿದೆ.

ಕನ್ಯಾ ರಾಶಿ : ನಿಮ್ಮ ಹಸ್ತಕ್ಷೇಪವು ಇತರರಿಗೆ ಕಷ್ಟವಾದೀತು.‌ ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ಆರ್ಥಿಕ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಒತ್ತಡಗಳನ್ನು ಮರೆತು ಒಂದೆಡೆ ಇರುವುದು ಸುಖವೆನಿಸುವುದು. ಹೆಚ್ಚಿನ‌ ಒತ್ತಡವನ್ನು ಮಾಡಿಕೊಳ್ಳದೇ ಕೆಲಸವನ್ನು ಮುಗಿಸುವಿರಿ. ವಿದೇಶಪ್ರಯಾಣವನ್ನು ಹೆಚ್ಚು ಅನಂದದಿಂದ ಮಾಡುವಿರಿ.

ತುಲಾ ರಾಶಿ : ದುಷ್ಟರ ಜೊತೆಗೂ ಒಂದು ರಾಜಿ ಮಾಡಿಕೊಳ್ಳಿ.‌ ಇಲ್ಲವಾದರೆ ನಿಮಗೆ ನೆಮ್ಮದಿ ಇರದು. ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಸಹಾಯವು ಸಿಗಲಿದೆ. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ದಾಂಪತ್ಯದಲ್ಲಿ ಕಲಹವಿರಲಿದ್ದು ಮುಂದುವರಿಸುವುದು ಬೇಡ. ಹಗುರವಾದುದನ್ನು ಎತ್ತುವುದು ಸುಲಭ. ಭಾರವಾದುದನ್ನು ಇಟ್ಟುಕೊಳ್ಳುವುದು ಸುಲಭ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗಲಿದೆ‌.

ವೃಶ್ಚಿಕ ರಾಶಿ : ಇಂದು ಖರ್ಚು ಮಾಡುವ ಮೊದಲು ಏನು ಲಾಭವಿದೆ ಎಂಬ ಲೆಕ್ಕಾಚಾರದಲ್ಲಿ ಇರುವಿರಿ. ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ದಾಂಪತ್ಯದಲ್ಲಿ ಪ್ರೀತಿಯು ಅಧಿಕವಾಗಿದ್ದು ಬಹಳ ಸಂತೋಷವನ್ನು ಅನುಭವಿಸುವಿರಿ. ಅಪರಿಚಿತರು ನಿಮ್ಮ ಮನೆಗೆ ಭೇಟಿಯಾಗಲಿದ್ದೀರಿ. ವೃತ್ತಿಯಲ್ಲಿ ನಿಮ್ಮ ಸಹಕಾರವು ಅಧಿಕವಾಗಿದ್ದು ಪ್ರಶಂಸೆಯು ಸಿಗಲಿದೆ.

ಧನು ರಾಶಿ : ಇಂದು ನೀವು ಭಾವಪರವಶರಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರನ್ನು ನೀವು ದೂರಮಾಡಿಕೊಳ್ಳುವಿರಿ. ನಿರಂತರ ಕೆಲಸವನ್ನು ಮಾಡದೇ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಭೂಮಿಯ ದಾಖಲೆಗಳನ್ನು ಸರಿಮಾಡಿಕೊಳ್ಳಲು ಶ್ರಮಿಸಬೇಕಾದೀತು.

ಮಕರ ರಾಶಿ : ಇಂದು ನಿಮ್ಮ‌ ಬಗ್ಗೆ ಬರುವ ಅಪವಾದವನ್ನು ನೀವು ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ತೃಪ್ತಿ ಇರದು. ಕೋಪ ಅಲ್ಪಾವಧಿಯಾದರು ಅದು ಹೆಚ್ಚು ಸಮಯವನ್ನು ಹಾಳುಮಾಡುವುದು.‌ ಪ್ರೇಮ ಸಂಬಂಧವು ಆಕರ್ಷಕವಾಗಿದ್ದರೂ ಬಹು ಕಾಲ ಉಳಿಯದು. ಇಂದು ನೀವು ಎದುರಾಳಿಯನ್ನು ಎದುರಿಸುವುದು ಕಷ್ಟವಾದೀತು.

ಕುಂಭ ರಾಶಿ : ನೀವು ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ಆಪ್ತರ ಮೇಲಿನ ನಂಬಿಕೆಯು ನಷ್ಟವಾಗುವುದು. ನಿಮ್ಮ ಇಂದಿನ ಸಮಯ ಹಾಗೂ ಶಕ್ತಿಯು ಇತರರಿಗೆ ಮೀಸಲಾದೀತು. ನಿಮಗೆ ಸಂಬಂಧಪಡದ ವಿಚಾರದಲ್ಲಿ ತೊಡಗಿಸಿಕೊಳ್ಳಬೇಡಿ. ನಿಮ್ಮ ಸಂಗಾತಿಯ ಜೊತೆ ಇಂದು ಏನನ್ನೂ ಹಂಚಿಕೊಳ್ಳದೇ, ಅವರು ಇಂದು ನಿಮ್ಮ ಜೊತೆ ಜಗಳವಾಡಬಹುದು.‌

ಮೀನ ರಾಶಿ : ಮಕ್ಕಳ ಜೀವನವನ್ನು ಕಂಡು ಇಂದು ದುಃಖವಾಗಬಹುದು. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ತಪ್ಪು ಕೆಲಸದಿಂದ ಅಧಿಕಾರಿಗಳು ಗದರಿಸುವರು.‌ ನಿಮ್ಮಿಂದ ಸ್ವಲ್ಪ ಉದಾಸೀನತೆಯೂ ಸಮಸ್ಯೆಯನ್ನು ಹೆಚ್ಚಾಗುವಂತೆ ಮಾಡುವುದು. ನೀವು ಪ್ರೀತಿಯಿಂದ ನೋವನ್ನು ಅನುಭವಿಸಬಹುದು. ಸಹೋದ್ಯೋಗಿಗಳು ಇಂದಿನ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡಬಹುದು. ಏಕಾಗ್ರತೆಯಿಂದ ಮಾಡುವ ಕೆಲಸವನ್ನು ಮಾಡಲು ಕಷ್ಟವಾದೀತು.

Leave a Reply

Your email address will not be published. Required fields are marked *