Wed. Nov 20th, 2024

Rakshit Shivaram: ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ಟೀಕೆ ಮಾಡಿಲ್ಲ – ರಕ್ಷಿತ್ ಶಿವರಾಮ್

Rakshit Shivaram: ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ಟೀಕೆ ಮಾಡಿಲ್ಲ – ರಕ್ಷಿತ್ ಶಿವರಾಮ್ಶಂಕರಾಚಾರ್ಯ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿಯ ಭಾಷಣದಲ್ಲಿ ಯಾವುದೇ ಹಿಂಸಾಚಾರದ ವಿಚಾರಗಳು ಇಲ್ಲ ಎಂದು ಹೇಳಿಕೆ ನೀಡಿದ ಮೇಲು ಭರತ್ ಶೆಟ್ಟಿ ಯವರು ಅದರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಇವರು ಪೀಠಾಧಿಪತಿಗಳ ವಿರೋಧಿಗಳಲ್ಲವೇ..? ಇವರು ಹಿಂದೂ ಪೀಠಾಧಿಪತಿಗಳ ವಿರೋಧಿಯೇ?

ರಾಹುಲ್ ಗಾಂಧಿಯವರು ದೇಶದಾದ್ಯಂತ ಸಂಘಪರಿವಾರ , ಬಿಜೆಪಿ ಹಿಂದುತ್ವದ ಸಿದ್ಧಾಂತದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಕಟುವಾಗಿ ಟೀಕಿಸಿದ್ದಾರೆಯೇ ಹೊರತು ಹಿಂದೂ ಧರ್ಮ , ಹಿಂದೂಗಳನ್ನು ಟೀಕೆ ಮಾಡಿಲ್ಲ.

ಓರ್ವ ಶಾಸಕನಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರನ್ನು ಏಕವಚನದಲ್ಲಿ ಲೋಕಸಭೆಗೆ ನುಗ್ಗಿ ಕಪಾಲಕ್ಕೆ ಭಾರಿಸಬೇಕು ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವುದು ಬಿಜೆಪಿಯ ಹಿಂಸಾಚಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಂಘಪರಿವಾರ , ಬಿಜೆಪಿಯ ಹಿಂಸಾಚಾರ ರಾಜಕೀಯವನ್ನು ಬಹಿರಂಗವಾಗಿ ಟೀಕಿಸಿದ್ದ ಭರತ್ ಶೆಟ್ಟಿ ಬಿಜೆಪಿ ಪಕ್ಷ ಸೇರಿ ಶಾಸಕರಾದ ಬಳಿಕ ಭಯಂಕರ ಹಿಂದುತ್ವವಾದಿಯಾಗಿದ್ದರೆ. ಜೆಡಿಎಸ್ ಪಕ್ಷದಲ್ಲಿದ್ದಾಗ ತನ್ನ ಹಿಂದಿನ ಮಾತನ್ನು ಭರತ್ ಶೆಟ್ಟಿ ಯವರು ಒಮ್ಮೆ ಯೋಚಿಸುವ ಅಗತ್ಯವಿದೆ. ಭರತ್ ಶೆಟ್ಟಿ ಎರಡೂ ನಾಲಿಗೆಯ ಹಾವಿನಂತೆ ವರ್ತಿಸುವ ಬದಲಾಗಿ ಸಂಘಪರಿವಾರ , ಬಿಜೆಪಿಯ ಹಿಂಸಾಚಾರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಘಪರಿವಾರ , ಬಿಜೆಪಿ ಕಾರ್ಯಕರ್ತರ ಮನೆಗೆ ತೆರಳಿ ಅವರ ಮನೆಯ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡಿದರೆ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾಡಿದ ಭಾಷಣದ ನಿಜವಾದ ಸ್ವರೂಪ ಅರ್ಥವಾಗುತ್ತದೆ.

Leave a Reply

Your email address will not be published. Required fields are marked *