ನವದೆಹಲಿ:(ಸೆ.29) ದೆಹಲಿಯಿಂದ ನ್ಯೂಯಾರ್ಕ್ ನಡುವಿನ ಏರ್ ಇಂಡಿಯಾ ವಿಮಾನ ಪ್ರಯಾಣ ವೇಳೆ ನೀಡಲಾಗಿದ್ದ, ಆಮ್ಲೆಟ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ಇದನ್ನೂ ಓದಿ; 🔴Belal:(ಅ.13) ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಇದರ ವತಿಯಿಂದ
ವಿಷಯಕ್ಕೆ ಸಂಬಂಧಿಸಿ ಆಹಾರ ಪೂರೈಕೆದಾರರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ಆಮ್ಲೆಟ್‌ನಲ್ಲಿ ಜಿರಳೆ ಪತ್ತೆಯಾಗಿರುವ ಬಗ್ಗೆ ಪ್ರಯಾಣಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆಮ್ಲೆಟ್‌ನಲ್ಲಿ ಜಿರಳೆ ಪತ್ತೆಯಾದಾಗ ನನ್ನ 2 ವರ್ಷದ ಮಗು ಅದನ್ನು ನನ್ನೊಂದಿಗೆ ಅರ್ಧಕ್ಕಿಂತ ಹೆಚ್ಚು ಭಾಗ ತಿಂದು ಮುಗಿಸಿತ್ತು.
ಇದರಿಂದಾದ ವಿಷಾಹಾರ ಬಾಧೆಗೂ ಮಗು ಒಳಗಾಯಿತು ಎಂದು ಬರೆದುಕೊಂಡಿದ್ದಾರೆ.
ಸೆ.17ರಂದು ದೆಹಲಿಯಿಂದ ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ 101 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು, ತಮಗೆ ನೀಡಲಾದ ಆಹಾರದಲ್ಲಿ ಅನ್ಯ ವಸ್ತು ಪತ್ತೆಯಾಗಿದ್ದನ್ನು,
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ನಮಗೆ ತಿಳಿದಿದೆ. ಗ್ರಾಹಕರ ಅನುಭವದ ಬಗ್ಗೆ ವಿಮಾನಯಾನ ಸಂಸ್ಥೆ ಕಾಳಜಿ ವಹಿಸಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಅಲ್ಲದೆ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ.