Virat Kohli: (ಸೆ.29) ವಿರಾಟ್ ಕೊಹ್ಲಿಗೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಫ್ಯಾನ್ಸ್ ಇದ್ದಾರೆ. ಕೊಹ್ಲಿ ಏರ್ಫೋರ್ಟ್ನಲ್ಲಿ ಕಾಣಿಸಿಕೊಂಡರೆ ಮುಗಿಬೀಳುವವರೇ ಹೆಚ್ಚು.
ಇದನ್ನೂ ಓದಿ: 🔴ಮದುವೆ ಗೊತ್ತಾಗಿದ್ದ ಯುವತಿಗೆ ಪರಪುರುಷನೊಂದಿಗೆ ಸಂಬಂಧ
ಇನ್ನು ಮೈದಾನಕ್ಕೆ ಇಳಿದಾಗ ಹೇಳುವುದು ಬೇಡ. ಕೊಹ್ಲಿಯನ್ನು ಕಾಣಲು ಎಲ್ಲೆಲ್ಲಿಂದಲೋ ಬರುವವರು ಇದ್ದಾರೆ. ಅದರಂತೆಯೇ 15 ವರ್ಷದ ಬಾಲಕನು ಕೊಹ್ಲಿಯನ್ನು ಕಾಣಲು 58 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ.
ಕಾರ್ತಿಕ್ ಎಂಬ ಬಾಲಕನು ಕೊಹ್ಲಿಯ ಅಪ್ಪಟ ಅಭಿಮಾನಿ. ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿಯನ್ನು ಕಾಣಲು ಈತ ಸೈಕಲು ಏರಿ ಬಂದಿದ್ದಾನೆ. ಬರೋಬ್ಬರಿ 58 ಕಿಲೋ ಮೀಟರ್ ಸೈಕಲ್ ತುಳಿದಿದ್ದಾನೆ.
ಅಂದಹಾಗೆಯೇ ಕಾರ್ತಿಕ್ ಉನ್ನಾವೋದಿಂದ ಕಾನ್ಪುರಕ್ಕೆ ಪ್ರಯಾಣ ಬೆಳೆಸಿದ್ದಾನೆ. 7 ಗಂಟೆಗಳ ಕಾಲ ಸೈಕಲ್ ತುಳಿದು ಕೊಹ್ಲಿಯನ್ನು ನೋಡಲು ಬಂದಿದ್ದಾನೆ.
ಬೆಳಗ್ಗೆ 4 ಗಂಟೆಗೆ ಸೈಕಲ್ ತುಳಿಯಲು ಪ್ರಾರಂಭಿಸಿದ್ದಾನೆ. ಅಂದಹಾಗೆಯೇ ಕಾರ್ತಿಕ್ 10ನೇ ತರಗತಿ ಓದುತ್ತಿದ್ದು, ಕೊಹ್ಲಿ ನೋಡಲು ಆತನ ಪೋಷಕರು ಒಪ್ಪಿಗೆ ನೀಡಿದ್ದಾರಂತೆ.