ಉಜಿರೆ(ಜು.11) : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ( ಸ್ವಾಯತ್ತ) , ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸ್ವಯಂಸೇವಕರು ಕಕ್ಕರಬೆಟ್ಟು , ಕಿರಿಯಾಡಿಯಲ್ಲಿ ಗದ್ದೆನಾಟಿ ನಡೆಸಿದರು.
ಮಾಲೀಕರಾದ ಡೀಕಯ್ಯ ಪೂಜಾರಿಯವರ ಮಾರ್ಗದರ್ಶನದಲ್ಲಿ 35 ಸ್ವಯಂಸೇವಕರ ತಂಡವು ಒಂದು ಎಕರೆ ಜಾಗದಲ್ಲಿ ಗದ್ದೆನಾಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಮನೆಯ ಹಿರಿಯರು ಹಲವಾರು ಕೃಷಿಯ ತಂತ್ರಗಳು , ಮತ್ತು ಆಧುನಿಕ ಯುಗದಲ್ಲಿ ಯುವ ಜನತೆಗೆ ಅಗತ್ಯವಾಗಿ ಬೇಕಾಗಿರುವ ಕೃಷಿಯ ಜ್ಞಾನದ ಕುರಿತು ವಿಚಾರವನ್ನು ಹಂಚಿಕೊಂಡರು.
ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ. ದೀಪಾ ಆರ್. ಪಿ. , ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿಯ ಸದಸ್ಯರಾದ ಶ್ರೀಮತಿ ಶ್ರುತಿ ,ರಸಾಯನ ಶಾಸ್ತ್ರ ವಿಭಾಗದ ಸಹಾಯಕರಾದ ಶ್ರೀ ಪರಮೇಶ್ವರ್ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.