Wed. Nov 20th, 2024

Moodabidre: ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ನಿಗೂಢ ಆತ್ಮಹತ್ಯೆ ಪ್ರಕರಣ: NSUI ದ.ಕ ಜಿಲ್ಲೆ ಹಾಗೂ ಮೂಲ್ಕಿ- ಮೂಡಬಿದ್ರೆ ಸಮಿತಿ ವತಿಯಿಂದ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡಿಸುವಂತೆ ಮೂಡಬಿದ್ರೆ ಪೊಲೀಸ್ ಠಾಣಾಧಿಕಾರಿ ಸಂದೇಶ್ ಪಿ . ಜಿ ಯವರಿಗೆ ಮನವಿ

ಮೂಡಬಿದ್ರೆ:(ಜು.11) ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಶ್ರೀನಿಧಿ ಶೆಟ್ಟಿ ಎಂಬ ವಿದ್ಯಾರ್ಥಿನಿಯ ನಿಗೂಢ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ NSUI ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮೂಲ್ಕಿ- ಮೂಡಬಿದ್ರೆ ಸಮಿತಿ ವತಿಯಿಂದ ಮೂಡಬಿದ್ರೆ ಪೊಲೀಸ್ ಠಾಣಾಧಿಕಾರಿ ಸಂದೇಶ್ ಪಿ . ಜಿ ಅವರನ್ನು ಭೇಟಿಮಾಡಿ ಸಮರ್ಪಕ ತನಿಖೆ ನಡೆಸಿ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುಹಾನ್ ಆಳ್ವ , ಮೂಲ್ಕಿ-ಮೂಡಬಿದ್ರೆ ಅಧ್ಯಕ್ಷ ಮನೀಷ್ ರಾಜ್ ,ಸೌಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಾಗ್ ಪೂಜಾರಿ , ಪ್ರತೀಕ್ , ರಫೀಜ್ , ಓಂ ಶ್ರೀ , ವಿಶಾಲ್, ರಾನ್ಸ್ಟನ್ , ಸೋಹನ್ ಉಪಸ್ಥಿತರಿದ್ದರು.

ಘಟನೆಯ ವಿವರ:
ಮಣಿಪಾಲದ ಹೆರ್ಗದಲ್ಲಿ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಚಿಕ್ಕಮಗಳೂರು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಇದನ್ನೂ ಓದಿ: https://uplustv.com/2024/07/11/ujire-ಶ್ರೀ-ಧ-ಮಂ-ಕಾಲೇಜಿನ-ಎನ್-ಎಸ್-ಎಸ್-ಸ್ವಯಂಸೇವಕರಿಂದ-ಗದ್ದೆ-ನಾಟಿ-ಕಾರ್ಯಕ್ರಮ/

ಈ ಯುವತಿ ಮಂಗಳೂರಿನ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ ಡಯಾಲಿಸಿಸ್ ಹಿನ್ನೆಲೆಯಲ್ಲಿ ಮೃತಳ ತಂದೆಯಾದ ಕೊಪ್ಪ ಹರಂದೂರು ಗ್ರಾಮದ ಮಹೇಶ್ ಎನ್ನುವವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇನ್ನು ಹೆರ್ಗ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಹಾಗೂ ಮಗಳೊಂದಿಗೆ ಮಹೇಶ್ ವಾಸವಾಗಿದ್ದರು. ಬಾಡಿಗೆ ಮನೆಯ ರೂಮ್​ನಲ್ಲಿ ಯಾರು ಇಲ್ಲದ ವೇಳೆ ಶ್ರೀನಿಧಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *