Wed. Nov 20th, 2024

Udupi: ಸರಕಾರಿ ನೌಕರರ 6 ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ

ಉಡುಪಿ:(ಸೆ.30) ಉಡುಪಿ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ನೌಕರರ ವಸತಿ ಗೃಹಗಳಿಗೆ ರವಿವಾರ ರಾತ್ರಿ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ನಗ-ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: ⭕ಕಾಸರಗೋಡು: ಕೆರೆಗೆ ಬಿದ್ದು ಮೂರು ವರ್ಷದ ಕಂದಮ್ಮ ಸಾವು

ಉಡುಪಿಯ ಪೊಲೀಸ್ ಸ್ಟೇಷನ್ ಎದುರೇ ಇರುವ ಸರ್ಕಾರಿ ನೌಕರರ ವಸತಿ ಸಮುಚ್ಚಯದಲ್ಲಿ ಈ ಘಟನೆ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ವಸತಿ ಸಮುಚ್ಚಯದ ಸುಮಾರು ಆರು ಮನೆಗಳಿಗೆ ಕಳ್ಳರು ನುಗ್ಗಿದ್ದು, ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಉಡುಪಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ವಸತಿ ಸಮುಚ್ಚಯದಲ್ಲಿ ವಿವಿಧ ಇಲಾಖೆಗಳ ಸರಕಾರಿ ನೌಕರರ ಕುಟುಂಬಗಳು ವಾಸವಾಗಿವೆ. ಎರಡು ದಿನಗಳ ಕಾಲ ರಜೆ ಇದ್ದ ಕಾರಣ ಇಲ್ಲಿನ ಕುಟುಂಬಗಳು ತಮ್ಮ ಊರಿಗೆ ತೆರಳಿದ್ದವು ಎಂದು ತಿಳಿದುಬಂದಿದೆ.

ಮನೆಯಲ್ಲಿ ಯಾರು ಇಲ್ಲದ ದಿನಗಳಲ್ಲಿ ಈ ಸಮುಚ್ಚಯದಲ್ಲಿನ ಆರು ಮನೆಗಳ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆನ್ನಲಾಗಿದೆ.

ಆರು ಮನೆಗಳ ಪೈಕಿ ಎರಡು ಮನೆಗಳಲ್ಲಿನ ಚಿನ್ನಾಭರಣ, ಮತ್ತೆರಡು ಮನೆಗಳಲ್ಲಿನ ನಗದು ಕಳವಾಗಿದ್ದು ಉಳಿದ ಎರಡು ಮನೆಗಳಲ್ಲಿ ಕಳವಿಗೆ ಯತ್ನ ನಡೆಸಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *