Wed. Nov 20th, 2024

Belthangady: ಯಶಸ್ವಿಯಾಗಿ ಸಂಪನ್ನಗೊಂಡ “ಯಕ್ಷಾವತರಣ – 5 ” ಯಕ್ಷಗಾನ ತಾಳಮದ್ದಳೆ ಸಪ್ತಾಹ

ಬೆಳ್ತಂಗಡಿ:(ಅ.1) ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ, ಸಂಚಾಲಕ ಅಶೋಕ ಭಟ್ಟರ ನೇತೃತ್ವದಲ್ಲಿ ಆಯೋಜಿಸಲಾದ “ಯಕ್ಷಾವತರಣ – 5” ಕಾರ್ಯಕ್ರಮವು ಯಕ್ಷಗಾನದ ಮಹೋಪಾಧ್ಯಾಯ ನೆಡ್ಳೆ ನರಸಿಂಹ ಭಟ್ಟರ ಸಂಸ್ಮರಣೆಯೊಂದಿಗೆ ಯಶಸ್ವಿಯಾಗಿ ಮುಗಿದಿದೆ.

ಇದನ್ನೂ ಓದಿ: 😱Shiruru hill collapse – ಗಂಗಾವಳಿ ನದಿಯಲ್ಲಿ ಮಾನವ ದೇಹದ 2 ಮೂಳೆ ಪತ್ತೆ

ಈ ಸಪ್ತಾಹವು ಯಕ್ಷಗಾನ ಕಲೆಯ ಸಾಂಸ್ಕೃತಿಕ ಶಕ್ತಿಯನ್ನು ಹೆಚ್ಚಿಸಲು ಮಹತ್ತರ ಪಾತ್ರ ವಹಿಸಿದೆ. ಕಾರ್ಯಕ್ರಮದ ಸಂಯೋಜನೆ, ನಿರ್ವಹಣೆ ಮತ್ತು ಯಶಸ್ಸು ಅಶೋಕ ಭಟ್ಟರ ದೃಢ ನಿಲುವು ಮತ್ತು ಸಂಘಟನಾ ಕೌಶಲ್ಯದ ಚತುರತೆಗೆ ಸಾಕ್ಷಿಯಾಗಿದೆ.


ಯಕ್ಷಗಾನ, ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಒಂದು ಜೀವಂತ ರೂಪ, ಈ ಕಾರ್ಯಕ್ರಮದ ಉದ್ಘಾಟನೆಯಿಂದ ಆರಂಭವಾಗಿ ಪ್ರತಿದಿನವೂ ವಿಭಿನ್ನ ಕಲಾವಿದರು ಮತ್ತು ಅರ್ಥಗಾರಿಕೆಯ ಮೂಲಕ ಜನರನ್ನು ಜನಾಕಾರ್ಷಣೆಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು . “ಯಕ್ಷಾವತರಣ – 5” ಕಾರ್ಯಕ್ರಮವು ವಿಶಿಷ್ಟವಾದ ಸಮತೋಲನವನ್ನು ಸಾಧಿಸಿದೆ.


ಪ್ರಾಚೀನ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೂಕ್ತ ಕಥೆಗಳ , ಪ್ರಸಂಗಗಳ , ತಾಳಮದ್ದಳೆ ಒಂದು ರೀತಿಯ ಮಾದರಿಯಾಗಿ ಅತ್ಯಂತ ಶಿಸ್ತು ಹಾಗೂ ಸಮಯ ಮಿತಿಯಲ್ಲಿ ದಿನವೂ ಪ್ರಸ್ತುತ ಗೊಂಡಿತು.ಇದು ಹಿರಿಯ ಯಕ್ಷಗಾನ ಆಸಕ್ತರನ್ನು ಆಕರ್ಷಿಸಿದಂತೆಯೇ ಯುವ ಪೀಳಿಗೆಯನ್ನೂ ಸೆಳೆದಿತ್ತು.


ಅಶೋಕ ಭಟ್ಟ ರವರ ನಿರಂತರ ಪ್ರಯತ್ನಗಳು, ನಿಸ್ವಾರ್ಥ ಸೇವಾಭಾವನೆ ಮತ್ತು ಸಾಂಸ್ಕೃತಿಕ ನಿಲುವು ಯಕ್ಷಗಾನವನ್ನು ಹೊಸ ಎತ್ತರಗಳಿಗೆ ಕೊಂಡೊಯ್ದಿವೆ. ಪ್ರತಿಷ್ಠಾನದ ಸದಸ್ಯರು, ಪ್ರಾಯೋಜಕರೊಂದಿಗೆ, ಈ ಯಶಸ್ಸಿನ ಹಿಂದೆ ನಿಂತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬೆನ್ನೆಲುಬಾಗಿ ನಿಂತಿದ್ದಾರೆ.


ಈ ಸಪ್ತಾಹವು ಯಕ್ಷಗಾನ ಕಲೆಯ ನಿರಂತರತೆಯನ್ನು ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಕೊನೆಯದಾಗಿ, “ಯಕ್ಷಾವತರಣ – 5” ಸಮತೋಲನದ ಯಶಸ್ಸು, ಕಲಾತ್ಮಕತೆ, ಮತ್ತು ಸಾಂಸ್ಕೃತಿಕ ಶ್ರದ್ಧೆಯ ವಿಶೇಷ ಮಾದರಿಯಾಗಿ ಪ್ರಸ್ತುತಗೊಂಡಿರುವುದು ಯಕ್ಷಗಾನ ಸಾಂಸ್ಕೃತಿಕ ವಲಯಕ್ಕೆ ಹೆಮ್ಮೆಯ ವಿಷಯವಾಗಿದೆ.

Leave a Reply

Your email address will not be published. Required fields are marked *