ಬೆಳ್ತಂಗಡಿ:(ಅ.1) ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ದಿನಾಂಕ: 26-09-2024 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದರು.
ಇದನ್ನೂ ಓದಿ: ⭕ದಾವಣಗೆರೆ : ಅನೈತಿಕ ಸಂಬಂಧಕ್ಕಾಗಿ ಎರಡನೇ ಪತ್ನಿಯನ್ನು ಕೊಂದ ಪತಿ
ಪ್ರಸ್ತುತ ಸದರಿ ಮುಷ್ಕರವನ್ನು ಮುಂದುವರಿಸಿರುವ ಕಾರಣ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌತಿ ಖಾತೆ, ಕ್ರಯದ ಹಕ್ಕಿನಂತೆ, ದಾನ ಶಾಸನ, ಕೋರ್ಟ್ ಆದೇಶದಂತೆ ಹಾಗೂ ಇನ್ನಿತರ ಆದೇಶಗಳಂತೆ ಮ್ಯುಟೇಶನ್ ಪ್ರಕ್ರಿಯೆಗೆ ಒಳಪಟ್ಟು ಪಹಣಿ ದಾಖಲಾತಿಗೆ ಸಂಬಂಧಿಸಿದಂತೆ
ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ತಾಲೂಕು ಕಚೇರಿಯಲ್ಲಿನ ಅರ್ಜಿ ಕಿಯೋಸ್ಕ್ ಕೇಂದ್ರ ಇಲ್ಲವೇ ಸಂಬಂಧಿಸಿದ ನಾಡ ಕಛೇರಿ ಹಾಗೂ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ರವರ ಕಾರ್ಯಾಲಯ ತಿಳಿಸಿದೆ.