Wed. Nov 20th, 2024

Sringeri: ಶೃಂಗೇರಿ ಮಠದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳಿಗೆ ಚಿನ್ನದ ನಾಣ್ಯದ ಹಾರ ಅರ್ಪಣೆ

ಶೃಂಗೇರಿ :(ಅ.2) ಶೃಂಗೇರಿ ಮಠದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳಿಗೆ ಚಿನ್ನದ ನಾಣ್ಯದ ಮಾಲೆಯನ್ನು ಅರ್ಪಣೆ ಮಾಡಲಾಗಿದೆ.

ಇದನ್ನೂ ಓದಿ; 🔴ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು, ಸನ್ಯಾಸ ದೀಕ್ಷೆ ಸ್ವೀಕರಿಸಿ ಐವತ್ತು ವರ್ಷಗಳಾದ ಹಿನ್ನೆಲೆ ಶಾರದಾ ಪೀಠದಿಂದ ಸ್ವಾಮೀಜಿಗಳಿಗೆ ಈ ವಿಶೇಷ ಗೌರವ ಸಲ್ಲಿಸಲಾಯಿತು.

ಈ ವಿಶೇಷವಾದ ಹಾರದಲ್ಲಿರುವ ಒಂದು ನಾಣ್ಯ 10 ಗ್ರಾಂ ತೂಕವಿದ್ದು, ಭಾರತೀ ತೀರ್ಥ ಸ್ವಾಮೀಜಿಗಳ ಫೋಟೋವಿದೆ. ಸಂಪೂರ್ಣ ಹಾರ ಚಿನ್ನದಿಂದ ರಚಿತವಾಗಿದೆ.

ಪೂಜ್ಯ ಭಾರತೀ ತೀರ್ಥ ಸ್ವಾಮೀಜಿಗಳು ಸನ್ಯಾಸತ್ವ ಸ್ವೀಕರಿಸಿ ಐವತ್ತು ವರ್ಷಗಳಾದ ಹಿನ್ನೆಲೆ ಮಠದಲ್ಲಿ ಸುವರ್ಣ ಭಾರತಿ ಮಹೋತ್ಸವ ಸಮಾರಂಭಗಳು ನಡೆಯುತ್ತಿದೆ.

ಈ ಹಿನ್ನೆಲೆ ಇದೀಗ ಚಿನ್ನದ ನಾಣ್ಯದ ವಿಶೇಷ ಹಾರವನ್ನು ಮಠದ ಭಕ್ತರ ಪರವಾಗಿ ಶಾರದಾ ಪೀಠದ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀ ಪಿಎ ಮುರುಳಿ ಸ್ವಾಮೀಜಿಗಳಿಗೆ ಮಾಲೆಯನ್ನು ಅರ್ಪಣೆ ಮಾಡಿದರು.

Leave a Reply

Your email address will not be published. Required fields are marked *