ಉಜಿರೆ:(ಅ.3) ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಬನಶಂಕರಿ ಕ್ರಿಯೇಶನ್ ಅರ್ಪಿಸುವ ಉಜಿರೆದಪ್ಪೆ ಮಮ್ಮಾಯಿ ತುಳು ಭಕ್ತಿ ಸುಗಿಪು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು ಉಜಿರೆಯ ಶ್ರೀ ಮಹಮ್ಮಾಯಿ ದೇವಸ್ಥಾನ ಮಾರಿಗುಡಿಯಲ್ಲಿ ನಡೆಯಿತು.
ಇದನ್ನೂ ಓದಿ: 🔥ಮಂಗಳೂರು: ತಾಸೆ ಪೆಟ್ಟಿಗೆ ಹೆಜ್ಜೆ ಹಾಕಿದ ಸಂಸದ ಕ್ಯಾ.ಬ್ರಿಜೇಶ್ ಚೌಟ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರು ಆದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಮಾತನಾಡಿದರು.
“ಉಜಿರೆದಪ್ಪೆ ಮಮ್ಮಾಯಿ” ತುಳು ಭಕ್ತಿ ಸುಗಿಪು ಧ್ವನಿಸುರುಳಿಯನ್ನು ಸನ್ವಿತ್ ಎಸ್ ಉಜಿರೆ ನಿರ್ಮಾಣ ಮಾಡಿದ್ದು, ಪಾರ್ಶ್ವನಾಥ್ ಜೈನ್ ಹೆರತ್ಯಾರು ಕಕ್ಯ ಪದವು ಅವರ ಸಾಹಿತ್ಯವಿದೆ.
ಗುರುವಾಯನಕೆರೆ ಸೌಂಡ್ ಮಾಸ್ಟರ್ ರೆಕಾರ್ಡಿಂಗ್ ಮಾಡಿರುವ ಈ ಧ್ವನಿಸುರುಳಿಯಲ್ಲಿ ಕೇಶವ ದೇವಾಂಗ ಬನಶಂಕರಿ ಉಜಿರೆ ಇವರ ಗಾಯನವಿದೆ. ಧ್ವನಿಸುರುಳಿಗೆ ಸಹನ್ ಎಂ.ಎಸ್ ಉಜಿರೆ ಇವರ ಸಂಕಲನವಿದ್ದು, ಇಶಾನಿ ಸ್ಟುಡಿಯೋ ಉಜಿರೆ ಇವರು ವಿಡಿಯೋಗ್ರಫಿ ಮಾಡಿದ್ದಾರೆ. ಧ್ವನಿಸುರುಳಿಗೆ ಸುರೇಂದ್ರ ಜೈನ್ ನಾರಾವಿ ಇವರು ಸಲಹೆ ಮತ್ತು ಸಹಕಾರ ನೀಡಿದ್ದು, ಜೊತೆಗೆ ಫೃಥ್ವಿರಾಜ್ ಶೆಟ್ಟಿ ಉಜಿರೆ ಇವರು ಕೂಡಾ ಸಹಕಾರ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ರಾಜಪ್ಪ ನೇಕಾರ ಬನಶಂಕರಿ ಉಜಿರೆ, ರವಿ ಆರ್.ಎಂ, ರಾಮಚಂದ್ರ ಶೆಟ್ಟಿ ಉಜಿರೆ, ಭರತ್ ಮಹಾಲಕ್ಷ್ಮೀ ಸ್ಟೋರ್ಸ್ ಉಜಿರೆ,
ವಿಶ್ವನಾಥ್ ಶೆಟ್ಟಿ ಮಂಜುಶ್ರೀ ಪ್ರೆಸ್ ಉಜಿರೆ, ಸಂತೋಷ್ ಕುಮಾರ್ ವಿನಾಯಕ ನಗರ ಉಜಿರೆ, ಸಹನ್ ಎಂ.ಎಸ್ ಉಜಿರೆ, ಹರಿಪ್ರಸಾದ್ ವಿನಾಯಕ ನಗರ ಉಜಿರೆ, ಯತೀಶ್ ವಿನಾಯಕ ನಗರ ಉಜಿರೆ, ಅಭಿನಂದನ್ ಬನಶಂಕರಿ, ಕುಮಾರಿ ಆರಾಧ್ಯ ಬನಶಂಕರಿ, ಯು. ಬಾಬು ಮುಗೇರ ಮೊಕ್ತೇಸರರು ಕೊರಗಜ್ಜ ದೇವಸ್ಥಾನ ಎರ್ನೋಡಿ ಉಪಸ್ಥಿತರಿದ್ದರು.