ಉಜಿರೆ :(ಜು.11) ಉಜಿರೆಯ ಹೃದಯ ಭಾಗದಲ್ಲಿ ಒಂದು ಮುರುಕಲು ಮನೆ, ಆ ಜೋಪಡಿಯಲ್ಲಿ ಒಂದು ಸಣ್ಣ ಬಡ ಕುಟುಂಬ. ಈ ಮನೆ ಯಾವ ರೀತಿ ಇದೆ ಎಂದರೆ ಮನೆಯ ಗೋಡೆಗಳನ್ನು ಬಿರುಕು ಬಿಟ್ಟಿದೆ. ಜೋರಾಗಿ ಮಳೆ ಸುರಿದರೆ ಮನೆಯ ಮೇಲ್ಛಾವಣಿ ಕೆಳಗೆ ಬೀಳುವ ಭೀತಿಯಲ್ಲಿದೆ.ನೆಲಗಳು ಹೋಳಾಗಿದೆ. ಗೋಡೆಗಳು ಬೀಳುವಂತಹ ಪರಿಸ್ಥಿತಿ. ಮನೆಯ ಪರಿಸ್ಥಿತಿ ಈ ರೀತಿ ಆದರೆ ಮನೆಯಲ್ಲಿ ಇರುವವರ ಪರಿಸ್ಥಿತಿ ಇನ್ನೊಂದು ರೀತಿ.
ಏನದು ಆ ವೃದ್ಧೆಯ ಕಥೆ?
ಉಜಿರೆ ಒಂದು ಸಿಟಿ. ದೊಡ್ಡ ದೊಡ್ಡ ಕಟ್ಟಡಗಳು , ನೂರಾರು ಮನೆಗಳು, ಆದರೆ ಉಜಿರೆಯ ಹೃದಯ ಭಾಗದಲ್ಲಿರುವ ಆ ಮನೆಗೆ ಅಸ್ತಿತ್ವವೇ ಇಲ್ಲ, ಈಗಲೋ ಆಗಲೋ ಅಂತ ಬೀಳುವ ಪರಿಸ್ಥಿತಿ. ಆ ಮನೆಯಲ್ಲಿ ಹೆದರಿಕೊಂಡೆ ಬದುಕುವಂತಹ ಪರಿಸ್ಥಿತಿ. ಆ ವೃದ್ಧೆಯ ಗೋಳು ಕೇಳುವವರೇ ಇಲ್ಲ …. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆ ವೃದ್ಧೆಗೆ ದುಡಿಯಲು ಕೂಡ ಕಷ್ಟ. ಮಳೆಗಾಲ ಶುರು ಆದರಂತೂ ಆ ಮನೆಯಲ್ಲಿ ನೀರು ಸೋರಲು ಆರಂಭವಾಗುತ್ತದೆ. ಗಾಳಿ ಬಂದರೆ ಆ ಮನೆಯೇ ಬೀಳಬಹುದು.
ಒಪ್ಪೊತ್ತಿನ ಊಟಕ್ಕೂ ಕಷ್ಟ!
ಮನೆಯ ಪರಿಸ್ಥಿತಿ ಹೀನಾಯವಾಗಿದೆ ಅದರ ಜೊತೆಗೆ ಅವರ ಜೀವನವು ಅತ್ಯಂತ ಕಷ್ಟಕರವಾಗಿದೆ. ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ವೃದ್ದೆ, ಒಂದೊತ್ತಿನ ಊಟಕ್ಕೂ ಪರಿತಪ್ಪಿಸುತ್ತಿದ್ದಾರೆ. ಇಬ್ಬರ ಮಕ್ಕಳನ್ನು ಕೆಲಸಕ್ಕೆ ಹೋಗದ ಅಜ್ಜಿಯೇ ಸಾಕುತ್ತಿದ್ದಾರೆ. ಸರ್ಕಾರದಿಂದ ಸಿಗುವ ಅಕ್ಕಿಯೇ ಅವರ ಊಟದ ದಾರಿಯಾಗಿದೆ.
ನೆರವಿಗಾಗಿ ಅಂಗಲಾಚುತ್ತಿರುವ ಅಜ್ಜಿ!
ಕಡು ಬಡತನದಲ್ಲಿರುವ ಈ ಅಜ್ಜಿಗೆ ಈಗ ನೆರವಿನ ಹಸ್ತ ಚಾಚಬೇಕಿದೆ. ಮನೆ ರಿಪೇರಿ, ಊಟಕ್ಕೆ ಸಹಾಯದ ಅಗತ್ಯತೆ ಇದೆ. ಗ್ರಾಮ ಪಂಚಾಯತ್, ಜನ ಪ್ರತಿನಿಧಿಗಳು, ದಾನಿಗಳು ಇವರ ಮನೆ ಕಡೆ ಹೆಜ್ಜೆ ಹಾಕಬೇಕಿದೆ.