ಬೆಳ್ತಂಗಡಿ:(ಅ.3) ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲೆ ನೇತೃತ್ವದಲ್ಲಿ ದೇವಾಲಯಗಳು ಸರ್ಕಾರೀಕರಣದಿಂದ ಮುಕ್ತಗೊಳಿಸಿ ಅಭಿಯಾನ ಕಾರ್ಯಕ್ರಮ ಇದೇ ಅಕ್ಟೋಬರ್ 6ರಂದು ನಡೆಯಲಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ ಮಾರಿಗುಡಿ ದೇವಸ್ಥಾನದಲ್ಲಿ ಆಕರ್ಷಣೆಯ ಹೂವಿನಲಂಕಾರ..!

ಸನಾತನ ಧರ್ಮದ ಅವಿಭಾಜ್ಯ ಅಂಗವಾಗಿರುವ ನಮ್ಮ ಹಿಂದೂ ದೇವಾಲಯಗಳನ್ನು ಸಕಾರ ತನ್ನ ತೆಕ್ಕೆಗೆ ತೆಗೆದುಕೊಂಡು ನಿರ್ವಹಿಸುತ್ತಿರೋದು ನಿಜಕ್ಕೂ ನಾಚಿಕೆಕೇಡಿನ ಸಂಗತಿ. ಪ್ರಪಂಚದ ಬೇರೆಲ್ಲೂ ಇಂತಹ ಪ್ರಸಂಗ ಕಾಣಸಿಗುವುದಿಲ್ಲ. ನಮ್ಮ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಹೊರತರಲು ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಬೇಕಿದೆ.



ಈ ಹಿನ್ನೆಲೆ ಭಾನುವಾರದಂದು ಬೆಳಗ್ಗೆ 7ಗಂಟೆಯಿಂದ ಸಂಜೆ 7 ಗಂಟೆಯ ತನಕ ಬೆಳ್ತಂಗಡಿ ತಾಲೂಕಿನಲ್ಲಿರುವ ಸುಪ್ರಸಿದ್ಧ ಕ್ಷೇತ್ರ ಶ್ರೀ ಸೌತಡ್ಕ ಮಹಾಗಣಪತಿ ಸನ್ನಿಧಾನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತೀರ್ಮಾನಿಸಲಾಗಿದೆ.

ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಹಾಗೂ ಸಂಘಟನೆಗಳ ಪ್ರಮುಖರು, ದೇವಸ್ಥಾನಗಳ ಮೊಕ್ತೇಸರರುಗಳು ಉಪಸ್ಥಿತರಿರಬೇಕಾಗಿ ವಿಶ್ವಹಿಂದೂ ಪರಿಷತ್ ವಿನಂತಿಸಿಕೊಂಡಿದೆ.



