ಉತ್ತರ ಪ್ರದೇಶ :(ಅ.4) ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆಳಕು ತೋರುವ ದೀವಿಗೆ ಇದ್ದಂತೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕಿದ್ದ ಶಿಕ್ಷಕನೇ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಇದನ್ನೂ ಓದಿ: ⭕ಮಲವಂತಿಗೆ: ಅಕ್ರಮ ಗೋಸಾಗಾಟ
ನೀಟ್ ಕೋಚಿಂಗ್ ಸೆಂಟರ್‌ನ ಬಯಾಲಜಿ ಟೀಚರ್ ತಾನೊಬ್ಬ ಶಿಕ್ಷಕನೆಂಬುದನ್ನೂ ಮರೆತು ವಿದ್ಯಾರ್ಥಿನಿಯೊಬ್ಬಳನ್ನು ತಬ್ಬಿ ಮುತ್ತಿಟ್ಟಿದ್ದಾನೆ. ಮಾತ್ರವಲ್ಲದೆ ಆಕೆಯನ್ನು ಶೌಚಗೃಹಕ್ಕೆ ಕರೆದುಕೊಂಡು ಹೋಗಿ ಅನುಚಿತ ವರ್ತನೆಯನ್ನು ತೋರಿದ್ದಾನೆ.
ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಕಾನ್ಪುರದ ಪ್ರತಿಷ್ಠಿತ ಕಾಕದೇವ್ ನೀಟ್ ಕೋಚಿಂಗ್ ಸೆಂಟರ್‌ನಲ್ಲಿ ನಡೆದಿದ್ದು, ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ತಬ್ಬಿ ಮುತ್ತಿಟ್ಟು ಅನುಚಿತವಾಗಿ ವರ್ತಿಸಿದ್ದಾನೆ.
ಬಯಾಲಜಿ ಶಿಕ್ಷಕನಾಗಿರುವ ಸಾಹಿಲ್ ಸಿದ್ದಿಕಿ ಈ ಅಸಹ್ಯ ಕೃತ್ಯವನ್ನು ಎಸಗಿದ್ದು, ಈ ದೃಶ್ಯಗಳು ಕೋಚಿಂಗ್ ಸೆಂಟರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ಅಶ್ಲೀಲ ಕೃತ್ಯಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕೋಚಿಂಗ್ ಸೆಂಟರ್‌ನ ಡೈರೆಕ್ಟರ್ ಆಶಿಶ್ ಶ್ರೀವಾಸ್ತವ ಮಾತನಾಡಿದ್ದು, ಈ ಹಿಂದೆಯೂ ಸಹ ಕೋಚಿಂಗ್ ಸೆಂಟರ್‌ನ ಅನೇಕ ವಿದ್ಯಾರ್ಥಿನಿಯರು ಸಾಹಿಲ್ ನಡವಳಿಕೆ ಸರಿಯಿಲ್ಲ ಎಂಬ ಬಗ್ಗೆ ದೂರನ್ನು ನೀಡಿದ್ದರು.
ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಿಯಾದ ಸಾಕ್ಷಿ ಸಿಕ್ಕಿದ್ದು, ಈ ಬಗ್ಗೆ ದೂರು ನೀಡಿದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.