Wed. Nov 20th, 2024

Puttur: ಪುತ್ತೂರು ಕಾಲೇಜು ಗ್ರಾಹಕ ವೇದಿಕೆ ಉದ್ಘಾಟನೆ

ಪುತ್ತೂರು: (ಅ.5) ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) 2024-25 ನೇ ಸಾಲಿನ ಗ್ರಾಹಕ ಸರ್ಟಿಫಿಕೇಟ್ ಕೋರ್ಸ್ ನ ಗ್ರಾಹಕ ವೇದಿಕೆ ಉದ್ಘಾಟನೆ ನಡೆಯಿತು.

ಇದನ್ನೂ ಓದಿ: 🔶ಕಾಸರಗೋಡು: ಎಡನೀರು ಮಠಕ್ಕೆ ಬಿಜೆಪಿ ಎಂ.ಎಲ್.ಸಿ. ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಭೇಟಿ

ಕಾಲೇಜಿನ ಸ್ನಾತೋತ್ತರ ವಿಭಾಗದ ಸೆಮಿನಾರ್ ಹಾಲಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಯ ಮಾಜಿ ಅಧ್ಯಕ್ಷ ಪ್ರಕಾಶ್ ಕೆ ಅವರು ದೀಪ ಬೆಳಗಿ ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಅವರು ಭಾರತದಲ್ಲಿರುವ ಗ್ರಾಹಕ ಹಕ್ಕು, ಕರ್ತವ್ಯ, ಪರಿಹಾರ ಪಡೆಯುವ ಮಾರ್ಗ ಇತ್ಯಾದಿ ಎಲ್ಲದರ ಬಗೆಗೂ ಉದಾಹರಣೆಯೊಂದಿಗೆ ಮಾಹಿತಿಯನ್ನು ನೀಡಿದರು.

ಉತ್ತಮ ಪರಿಹಾರಕ್ಕಾಗಿ ದಾಖಲೆಗಳೆಲ್ಲವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ ಎಂದು ಹಲವಾರು ಗ್ರಾಹಕ ಸಂಬಂಧಿ ನ್ಯಾಯ ದಾನದ ಸಂದರ್ಭದ ಉದಾಹರಣೆಗಳೊಂದಿಗೆ ವಿವರಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಪತ್ರಕರ್ತರು, ಲೇಖಕ ರಾಯಿ ರಾಜಕುಮಾರ ಮೂಡುಬಿದಿರೆ ರವರು ಮಾತನಾಡಿ “ಗ್ರಾಹಕನೇ ರಾಜ” ಹೇಗೆ ಎಂಬುದನ್ನು ಹಲವಾರು ಸಾಂದರ್ಭಿಕ ಮಾಹಿತಿಗಳೊಂದಿಗೆ ವಿವರಿಸಿದರು. ಅಲ್ಲದೆ ಗ್ರಾಹಕ ಜಾಗರೂಕನಾಗಿದ್ದರೆ ತನ್ನ ಜವಾಬ್ದಾರಿಯೊಂದಿಗೆ ಹಕ್ಕನ್ನು ಸಾಧಿಸಬಹುದಾಗಿದೆ. ನ್ಯಾಯ, ನಿಷ್ಠೆ, ಪ್ರಾಮಾಣಿಕವಾಗಿ ವ್ಯವಹರಿಸಿದರೆ ಎಲ್ಲೆಡೆ ಬೆಲೆ, ಗೌರವ, ಶ್ರೇಷ್ಠತೆ ದೊರೆಯುತ್ತದೆ ಎಂದರು.


ಕಾಲೇಜಿನ ಪ್ರಾಚಾರ್ಯ ಡಾ. ಅಂತೋನಿ ಪ್ರಕಾಶ್ ಮೊಂತೆರೋ ಅವರು ಕಾರ್ಯಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಮಾರ್ಗದರ್ಶಕರಿಗಿಂತ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಕಾರ್ಯರೂಪಕ್ಕೆ ತಂದು ಕಾಲೇಜನ್ನು ಮಂಚೂಣಿಯಲ್ಲಿ ಕೊಂಡೊಯ್ಯಬೇಕೆಂದು ಕರೆಕೊಟ್ಟರು.

ವೇದಿಕೆಯಲ್ಲಿ ಗ್ರಾಹಕ ಸಂಯೋಜಕ ಉಪನ್ಯಾಸಕರುಗಳಾದ ಪ್ರವೀಣ್ ಡಿ ಹಾಗೂ ಸ್ವಾತಿ ಶೆಟ್ಟಿ ಡಿ ಉಪಸ್ಥಿತರಿದ್ದರು.
ಪ್ರಿಯಾಂಕ ಸ್ವಾಗತಿಸಿದರು. ಇಮ್ರಾನ್ ತಾಜ್ ಕಾರ್ಯಕ್ರಮ ನಿರ್ವಹಿಸಿದರು. ಬಾಸಿಲ್, ತನ್ವೀರ್ ಪಿಂಟೋ, ಲಿಖಿತ ಅತಿಥಿ ಗಳ ಪರಿಚಯ ಮಾಡಿಕೊಟ್ಟರು. ವಿಶ್ಮಿತ್ ಧನ್ಯವಾದ ಸಲ್ಲಿಸಿದರು.

Puttur: Inauguration of Puttur College Consumer Forum

Leave a Reply

Your email address will not be published. Required fields are marked *