Kichcha Sudeep:(ಅ.6) ಬಿಗ್ಬಾಸ್ ಕನ್ನಡ ಸೀಸನ್ 11 ಒಂದು ವಾರದ ಹಿಂದಷ್ಟೆ ಪ್ರಾರಂಭವಾಗಿದೆ. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ತುಸು ಭಿನ್ನ ಸ್ಟೈಲ್ನಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡರು.
ಇದನ್ನೂ ಓದಿ: ⭕ಸೈಬರ್ ವಂಚಕರ ಸುಳ್ಳು ಕೇಳಿ ಹೃದಯಸ್ತಂಭನ
ಪ್ರತಿ ಬಾರಿ ಮೊದಲ ವಾರದ ಪಂಚಾಯಿತಿ, ಭರ್ಜರಿ ಉಡುಪು ಧರಿಸಿ, ಸಖತ್ ಸ್ಟೈಲಿಷ್ ಆಗಿ ಆಗಮಿಸುತ್ತಿದ್ದ ಸುದೀಪ್ ಈ ಬಾರಿ ಸ್ಟೈಲಿಷ್ ಆಗಿದ್ದರೂ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ವೇದಿಕೆ ಏರಿದ್ದರು.
ಪ್ರೇಕ್ಷಕರು ಗುರುತಿಸಿದ ಪ್ರಮುಖ ಬದಲಾವಣೆ ಎಂದರೆ ಕಿಚ್ಚ ಸುದೀಪ್ ಬರಿಗಾಲಲ್ಲೆ ಬಿಗ್ಬಾಸ್ ವೇದಿಕೆಗೆ ಬಂದಿದ್ದರು. ಹೀಗೆ ಬರಿಗಾಲಲ್ಲಿ ವೇದಿಕೆ ಬರಲು ಕಾರಣವೂ ಇತ್ತು.
ಕಿಚ್ಚ ಸುದೀಪ್ ಬೂದು ಬಣ್ಣದ ಶೇರ್ವಾನಿ ಮಾದರಿಯ ಉಡುಪು ಧರಿಸಿ ಸರಳವಾಗಿ ವೇದಿಕೆಗೆ ಎಂಟ್ರಿ ಕೊಟ್ಟರು. ಕಳೆದ ಬಾರಿ ‘ಕಿಚ್ಚ-ಕಿಚ್ಚ’ ಎಂದು ಮ್ಯೂಸಿಕ್ ಹಾಕಿ ಸುದೀಪ್ ಕಾಲಿನಿಂದ ಕ್ಯಾಮೆರಾ ಪ್ಯಾನ್ ಮಾಡಿ ಮುಖ ತೋರಿಸುತ್ತಿದ್ದರು.
ಆದರೆ ಈ ಬಾರಿ ಹಾಗೆ ಸಹ ಮಾಡಲಿಲ್ಲ. ಬದಲಿಗೆ ಸರಳವಾಗಿ ಬಿಗ್ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟರು, ಯಾವುದೇ ಗಾಗಲ್ಸ್ ಇಲ್ಲದೆ, ಸರಳವಾಗಿ ಸ್ಟೈಲಿಷ್ ಆಗಿಯೇ ಕಿಚ್ಚ ಕಾಣುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅವರು ಬರಿಗಾಲಲ್ಲಿ ಬಿಗ್ಬಾಸ್ ವೇದಿಕೆಗೆ ಬಂದಿದ್ದರು.
ಸುದೀಪ್ ಬರಿಗಾಲಲ್ಲಿ ಬಿಗ್ಬಾಸ್ಗೆ ಬರಲು ಕಾರಣವಿತ್ತು. ನವರಾತ್ರಿ ಪ್ರಾರಂಭ ಆಗಿರುವ ಕಾರಣ ಸುದೀಪ್, ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ಬರಿಗಾಲಿನಲ್ಲಿಯೇ ಬಿಗ್ಬಾಸ್ ವೇದಿಕೆ ಏರಿದ್ದರು.
ನವರಾತ್ರಿ ಆಚರಣೆ ಮಾಡುವಂತೆ ಸುದೀಪ್ ಅವರ ತಾಯಿ ಹೇಳಿದ್ದರಂತೆ. ಅದೇ ಕಾರಣಕ್ಕೆ ನಿನ್ನೆ ವೇದಿಕೆಗೆ ಬಂದ ಕೂಡಲೇ ಕ್ಯಾಮೆರಾ ನೋಡಿ, ‘ಬರಿಗಾಲಲ್ಲಿ ಬಂದಿದ್ದೀನಿ, ಬೂದು ಬಣ್ಣದ ಶೇರ್ವಾನಿ ಮಾದರಿ ಬಟ್ಟೆ ಹಾಕಿಕೊಂಡಿದ್ದೀನಿ, ಓಕೆ ನಾ ಅಮ್ಮ’ ಎಂದು ಬಿಗ್ಬಾಸ್ ಶೋ ಮೂಲಕ ತಾಯಿಗೆ ಕೇಳಿದರು.
Kichcha Sudeep came to Big Boss stage without wearing slippers!! Do you know the reason?