ಬೈಲಡ್ಕ:(ಅ.8) ವಾಸಿಸಲು ಯೋಗ್ಯವಾದ ಮನೆಯಿಲ್ಲ. ಆರೋಗ್ಯದ ಸ್ಥಿತಿಯೂ ಸರಿಯಿಲ್ಲ. ಜೀವನ ಹೇಗಪ್ಪಾ ನಡೆಸುವುದು ಅಂತ ಯೋಚನೆ ಮಾಡುತ್ತಾ ಕುಳಿತಿದ್ದ ಕುಟುಂಬ ಶಿರ್ಲಾಲು ಗ್ರಾಮದ ಬೈಲಡ್ಕ ನಿವಾಸಿ ಸುಂದರ ಮಲೆಕುಡಿಯ. ಯು ಪ್ಲಸ್ ನ ಒಂದು ವರದಿಗೆ ಆ ಕುಟುಂಬದ ಚಿತ್ರಣವೇ ಬದಲಾಯಿತು.
ಇದನ್ನೂ ಓದಿ: ⭕ಪುತ್ತೂರು: ಹಾಲುಮಡ್ಡಿ ಅಕ್ರಮ ಸಾಗಾಟ- 4 ಮಂದಿ ಬಂಧನ
ಮನೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಕೇರ್ ಚಾರಿಟೇಬಲ್ ಟ್ರಸ್ಟ್ ನ ಅನಿಲ್ ಮುಂದೆ ಬಂದರು. ಧೈರ್ಯವನ್ನು ತುಂಬಲು ಅವಿಲ್ , ಸೇವಾ ಭಾರತಿಯ ವಿನಾಯಕ ರಾವ್ ಕೂಡ ಜೊತೆಯಾದರು. ಹಳೆ ಮನೆ ಕೆಡವಲು ಜೆ ಸಿ ಬಿ ಯ ಮಾಲಕರಾದ ಪ್ರಕಾಶ್ ಉಚಿತವಾಗಿ ಸಹಾಯ ಮಾಡಿದರು.
ನೂತನ ಮನೆಯ ಭೂಮಿ ಪೂಜೆ ಕಾರ್ಯಕ್ರಮವು ಅ.7 ರಂದು ನಡೆಯಿತು. ಪಂಚಾಂಗ ಕಟ್ಟುವ ವೇಳೆ ಶಿರ್ಲಾಲು ಗ್ರಾಮದ ಕೆಲವು ಯುವಕರು ಜೊತೆ ಸೇರುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಇನ್ನೇನೂ ಹೊಸ ಮನೆಯ ಕೆಲಸ ಆರಂಭವಾಗಿದೆ. ಸುಂದರ ಅವರ ಆರೋಗ್ಯದಲ್ಲಿಯೂ ಸುಧಾರಣೆ ಕಾಣಿಸುತ್ತಿದೆ. ನೊಂದು ಹೋಗಿದ್ದ ಕುಟುಂಬಕ್ಕೆ ಆಸರೆಯ ನೆರಳಾಗಿ ಬಹಳಷ್ಟು ಜನ ಮುಂದೆ ಬಂದು ಸಹಾಯವನ್ನು ಮಾಡುತ್ತಿದ್ದಾರೆ.
ಹೊಸ ಮನೆಯ ಭೂಮಿ ಪೂಜೆಯನ್ನು ಸ್ಥಳೀಯ ಪುರೋಹಿತರಾದ ಸೂರ್ಯ ನಾರಾಯಣ ಭಟ್ ನೆರವೇರಿಸಿ ಕೊಟ್ಟರು. ಯು ಪ್ಲಸ್ ನ ವರದಿಗೆ ಸಿಕ್ಕ ಸ್ಪಂದನೆಯಂತೂ ಅಭೂತಪೂರ್ವವಾಗಿದೆ.
Bailadka Sundara’s dream house Bhoomi Pooja