Wed. Nov 20th, 2024

Padubidri: ಕಾರು ಚಾಲಕನ ನಿದ್ರೆ ಮಂಪರಿನಿಂದ ಸರಣಿ ಅಪಘಾತ – ಭಾರೀ ಅನಾಹುತ ತಪ್ಪಿದ್ದು ಹೇಗೆ ಗೊತ್ತಾ?

ಪಡುಬಿದ್ರಿ :(ಅ.8) ತೆಂಕ ಎರ್ಮಾಳು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಗಾಯಗೊಂಡು ಮೂರು ವಾಹನಗಳು ಜಖಂಗೊಂಡಿದೆ.

ಇದನ್ನೂ ಓದಿ: 🔥ಗಿಚ್ಚಿ ಗಿಲಿಗಿಲಿ ಸೀಸನ್‌-3 ರ ವಿಜೇತ ಹುಲಿ ಕಾರ್ತಿಕ್‌ ಮೇಲೆ ಎಫ್‌ಐಆರ್‌‌ !!

ಗೂಡ್ಸ್ ಟೆಂಪೊವೊಂದು ಎರ್ಮಾಳು ಜಂಕ್ಷನ್ ನ ಸತ್ಕಾರ್ ಹೊಟೇಲ್ ಮುಂಭಾಗ ರಸ್ತೆ ಬಿಟ್ಟು ನಿಂತಿದ್ದು, ಮಂಗಳೂರು ಕಡೆಯಿಂದ ವೇಗವಾಗಿ ಬಂದ ಹೊಂಡಾ ಸಿಟಿ ಕಾರೊಂದು ನೇರವಾಗಿ ರಸ್ತೆಬಿಟ್ಟು ಕೆಳಗಿಳಿದು ಗೂಡ್ಸ್ ಟೆಂಪೊಗೆ ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ಟೆಂಪೊ ಹೊಟೇಲ್ ನ ಮುಂಭಾಗಕ್ಕೆ ಹಾರಿ ಅಲ್ಲೇ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಆಟೋ ರಿಕ್ಷಾದೊಂದಿಗೆ ಟೆಂಪೊ ಕೂಡಾ ಅಡ್ಡ ಬಿದ್ದು ಜಖಂಗೊಂಡಿದೆ. ಕಾರು ಬಹುತೇಕ ಜಖಂಗೊಂಡು ಮರಳಿ ಮಂಗಳೂರು ಕಡೆಗೆ ತಿರುಗಿ ನಿಂತಿದೆ.

ಕಾರು ಚಾಲಕ ಪುತ್ತೂರು ನಿವಾಸಿ ಸುಜೀತ್ (30)ಕಣ್ಣು ಹಾಗೂ ಮೂಗು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಉಡುಪಿ ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಸದಾ ಹೊತ್ತು ಈ ಹೋಟೆಲ್ ಮುಂಭಾಗ ಕಾಫಿ ಕುಡಿಯಲು ಬರುವವರು ಇರುತ್ತಿದ್ದು, ಅದೃಷ್ಟವಶಾತ್‌‌ ಯಾರೂ ಆ ಸಂದರ್ಭ ಇಲ್ಲದ್ದರಿಂದ ಬಾರೀ ದುರಂತ ತಪ್ಪಿದಂತ್ತಾಗಿದೆ. ಸಾರ್ವಜನಿಕರು ಹೆದ್ದಾರಿಗಡ್ಡವಾಗಿ ನಿಂತಿದ್ದ ಅಪಘಾತ ಕಾರನ್ನು ಪಕ್ಕಕ್ಕೆ ದೂಡಿ ಹೆದ್ದಾರಿ ಸಂಚಾರ ಮುಕ್ತಗೊಳಿಸಿದ್ದಾರೆ.

Padubidri :(A.8) One person was injured in a serial accident at Tenka Ermalu Junction National Highway 66 and three vehicles collided

Leave a Reply

Your email address will not be published. Required fields are marked *