ಬೆಳಾಲು :(ಅ.8)ಮದ್ಯಪಾನ ಎನ್ನುವುದು ಮನುಷ್ಯನಿಗೆ ಒಮ್ಮೆ ಅಂಟಿಕೊಂಡರೆ ಅದು ನಾವು ಬಿಟ್ಟರು ಸುಲಭವಾಗಿ ಬಿಡುವುದಿಲ್ಲ. ಈ ದುಶ್ಚಟಗಳು ಪಂಚೇಂದ್ರಿಯಗಳನ್ನು ಆಕರ್ಷಿಸುತ್ತದೆ. ಪ್ರತಿ ಮದ್ಯದಂಗಡಿಗಳ ಮುಂದೆ ಮಜಾ ಮಾಡಿ ಎಂದು ಫಲಕ ಹಾಕಿದ್ದಾರೆ, ಅವರು ಧರ್ಮಾರ್ಥವಾಗಿ ಕೊಟ್ಟು ಮಜಾ ಮಾಡಲು ಹೇಳುವುದಿಲ್ಲ, ಆದರೆ ಯಾರ ಹಣದಲ್ಲಿ ಮಜಾ ಮಾಡಬೇಕು, ಇದರಿಂದ ಜೀವನ, ಕುಟುಂಬ ಸಮಾಜ ನಾಶವಾಗುತ್ತದೆ.
ಆ ಜೀವನಕ್ಕೆ ಮತ್ತೆ ಹೋಗಬಾರದು, ದುಶ್ಚಟಗಳನ್ನು ಬಿಟ್ಟಾಗ ಮಾತ್ರ ಸುಖ, ಶಾಂತಿ ಜೀವನ ಎಂದರು. ಪರಿವರ್ತನೆಗೊಂಡವರು ಮತ್ತೆ ಚಂಚಲಗೊಳ್ಳದೆ ಗಟ್ಟಿ ಮನಸ್ಸು ಮಾಡಿ ದುಶ್ಚಟದಿಂದ ದೂರ ಇರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು. ಈ ಶಿಬಿರವು ಯಶಸ್ವಿಯಾಗಿದೆ. ಗ್ರಾಮವನ್ನು ಅಭಿನಂದಿಸುತ್ತೇನೆ ಎಂದು ಶುಭ ಹಾರೈಸಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಳಾಲು, ಶ್ರೀ ಕ್ಷೇ.ಧ.ಗ್ರಾ. ಯೋ. ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಅಖಿಲ ಕರ್ನಾಟಕ ಜನಜಾಗೃತಿ ಮಾಜಿ ಅದ್ಯಕ್ಷರುಗಳಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ವಸಂತ ಸಾಲ್ಯಾನ್ , ಅಡೂರ್ ವೆಂಕಟ್ ರಾವ್ ,
ತಿಮ್ಮಪ್ಪ ಗೌಡ ಬೊಳಂದೂರು, ಮಾಜಿ ತಾ.ಪಂ.ಅಧ್ಯಕ್ಷ ಜತ್ತನ್ನ ಗೌಡ, ಶಾರದಾ ಆರ್ ರೈ ಸಂಪನ್ಮೂಲ ವ್ಯಕ್ತಿ, ನಿರ್ದೇಶಕರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಶಿಬಿರಾಧಿಕಾರಿ ದೇವಿಪ್ರಸಾದ್ , ಸಿಯೋನ್ ಆಶ್ರಮದ ಯು.ಸಿ.ಪೌಲೋಸ್ ಉಪಸ್ಥಿತರಿದ್ದರು.
76 ಮಂದಿ ನವಜೀವನಕ್ಕೆ ಕಾಲಿಡಲಿದ್ದಾರೆ ಎಂದು ಆಯೋಜಕರು ತಿಳಿಸಿದರು. ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.