Sat. Apr 19th, 2025

Vinesh Phogat : ಒಲಿಂಪಿಕ್ಸ್‌ನಲ್ಲಿ ಕುಸ್ತಿ ಕೈ ಕೊಟ್ಟರೂ ಚುನಾವಣಾ ಕುಸ್ತಿಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ವಿನೇಶ್‌ ಪೋಗಟ್

Vinesh Phogat :(ಅ.8) ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಮಾಜಿ ಕುಸ್ತಿ ಪಟು ವಿನೇಶ್ ಪೋಗಟ್ ವಿಜಯ ಪತಾಕೆ ಹಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: 🟣Ujire: ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ ತರಬೇತಿಯ ಸಮಾರೋಪ ಸಮಾರಂಭ

ವಿನೇಶ್ ಪೋಗಟ್ ಹರಿಯಾಣದ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ರೋಚಕ ಚುನಾವಣಾ ಫಲಿತಾಂಶದಲ್ಲಿ ವಿನೇಶ್ ಪೋಗಟ್ ಗೆಲುವು ಸಾಧಿಸಿದ್ದು, ಸಂಭ್ರಮಾಚರಣೆ ಶುರುವಾಗಿದೆ.

ಹರಿಯಾಣ ಎಲೆಕ್ಷನ್‌ನಲ್ಲಿ ಈ ಬಾರಿ ಜೂಲಾನಾ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್‌ ಅಖಾಡವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಪೋಗಟ್ ಅವರ ವಿರುದ್ಧ ಬಿಜೆಪಿಯಿಂದ ಮಾಜಿ ಸೇನಾಧಿಕಾರಿ, ಕ್ಯಾಪ್ಟನ್ ಯೋಗೇಶ್ ಬೈರಾಗಿ ಹಾಗೂ ಮಾಜಿ ಕುಸ್ತಿ ಪಟು ಕವಿತಾ ದಲ್ಲಾಲ್ ಅವರು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದರು.


ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ನಿವೃತ್ತಿ ಘೋಷಿಸಿದ್ದ ವಿನೇಶ್ ಫೋಗಟ್ ಮೊಟ್ಟ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯ ಅಗ್ನಿ ಪರೀಕ್ಷೆಯಲ್ಲೇ ಮಾಜಿ ಕುಸ್ತಿ ಪಟು ವಿನೇಶ್ ಪೋಗಟ್ ಅವರು ಗೆಲುವಿನ ರಣಕೇಕೆ ಹಾಕಿದ್ದಾರೆ.


ಜೂಲಾನಾ ವಿಧಾನಸಭಾ ಕ್ಷೇತ್ರದಲ್ಲಿ ವಿನೇಶ್ ಪೋಗಟ್ ಅವರು ಬಿಜೆಪಿಗೆ ಸೆಡ್ಡು ಹೊಡೆದಿದ್ದು, ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಮಣಿಸಿದ್ದಾರೆ.

ಸದ್ಯದ ಮತ ಎಣಿಕೆಯ ಮುಕ್ತಾಯಕ್ಕಾಗಿ ವಿನೇಶ್ ಫೋಗಟ್‌ ಅವರು ತಮ್ಮ ಎದುರಾಳಿ ವಿರುದ್ಧ ಬರೋಬ್ಬರಿ 6,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆರಂಭಿಕವಾಗಿ ಪೋಗಟ್‌ ಮುನ್ನಡೆ ಅಂತರ ಕಡಿಮೆಯಿದ್ದು, ಬೇಸರದಿಂದ ಮತ ಎಣಿಕೆ ಕೇಂದ್ರದಿಂದ ಹೊರನಡೆದಿದ್ದರು ಎಂದು ವರದಿಗಳಾಗಿದ್ದವು.

Leave a Reply

Your email address will not be published. Required fields are marked *