Rishab Shetty:(ಅ.9) ನಟ, ನಿರ್ದೇಶಕ ರಿಷಬ್ ಶೆಟ್ಟಿ ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ “ಅತ್ಯುತ್ತಮ ನಟ” ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಪತ್ನಿ ಸಮೇತರಾಗಿ ದೆಹಲಿಗೆ ತೆರಳಿದ ರಿಷಬ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿ ಖುಷಿಪಟ್ಟಿದ್ದಾರೆ. ವಿಶೇಷ ಏನೆಂದರೆ, ಅವರು ದಕ್ಷಿಣ ಭಾರತದ ಹೆಮ್ಮೆಯ ದಿರಿಸಿನಲ್ಲಿ ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ: 🔴ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪವಿತ್ರ ಭೋಜನ ಪ್ರಸಾದದಲ್ಲಿ ವಿನೂತನ ಬದಲಾವಣೆ
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದ ಮೂಲಕ ಅವರು ದೇಸಿ ಕಹಾನಿಯನ್ನು ಹೇಳಿದ್ದರು. ಆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಅವರ ನಟನೆಯನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆದರು. ಎಷ್ಟೇ ಫೇಮ್ ಸಿಕ್ಕರೂ ಕೂಡ ಅವರು ತುಳುನಾಡಿನ ಸೊಗಡನ್ನು ಮರೆತಿಲ್ಲ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಅವರು ಈಗಾಗಲೇ ಅನೇಕ ಕಾರ್ಯಕ್ರಮಗಳಿಗೆ ಪಂಚೆ ಧರಿಸಿ ಹೋಗಿದ್ದರು. ಸಾಮಾನ್ಯವಾಗಿ ಕಲಾವಿದರು ಅವಾರ್ಡ್ ಫಂಕ್ಷನ್ಗಳಿಗೆ ಹೋಗುವಾಗ ಸೂಟು-ಬೂಟು ಧರಿಸುತ್ತಿದ್ದರು. ಆದರೆ ಕೆಲವು ನಟರು ಅಪ್ಪಟ ಸಾಂಪ್ರದಾಯಿಕ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥವರ ಸಾಲಿನಲ್ಲಿ ರಿಷಬ್ ಶೆಟ್ಟಿ ಕೂಡ ಇದ್ದಾರೆ. ಪಂಚೆ ಧರಿಸಿ ಅವರು ವೇದಿಕೆ ಏರಿದ್ದಾರೆ.
ನ್ಯಾಷನಲ್ ಅವಾರ್ಡ್ ಪಡೆದ ರಿಷಬ್ ಶೆಟ್ಟಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ರಿಷಬ್ ಶೆಟ್ಟಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ “ಈ ಗೌರವ ನಮ್ಮದಲ್ಲ ನಿಮ್ಮದು. ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗಿದ್ದು ಕಾಂತಾರವೆಂಬ ಕನಸನ್ನು ನನಸಾಗಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರೀತಿಗೆ ಸದಾ ಕೃತಜ್ಞರಾಗಿರುತ್ತೇವೆ” ಎಂದು ಹಂಚಿಕೊಂಡಿದ್ದಾರೆ.