Wed. Nov 20th, 2024

Kerala: ಶಬರಿಮಲೆ ಭಕ್ತರ ಬೆನ್ನಿಗೆ ನಿಂತ ಕೇರಳ ಹೈಕೋರ್ಟ್ – ಅಯ್ಯಪ್ಪ ಭಕ್ತರ ಶೋಷಣೆ ನ್ಯಾಯಾಲಯ ಸಹಿಸುವುದಿಲ್ಲ..!!

ಕೇರಳ:(ಅ.11) ಶಬರಿಮಲೆ ಯಾತ್ರಾ ಸೀಸನ್ ಇನ್ನೇನು ಪ್ರಾರಂಭವಾಗಲಿದ್ದು, ಈ ನಡುವೆ ಅಯ್ಯಪ್ಪ ಭಕ್ತರ ಮೇಲೆ ಮತ್ತೆ ಶೋಷಣೆ ಮಾಡಲು ಮುಂದಾದ ಕೇರಳ ಸರಕಾರದ ವಿರುದ್ದ ಕೇರಳ ಹೈಕೋರ್ಟ್ ಗರಂ ಆಗಿದ್ದು, ಶಬರಿಮಲೆ ಯಾತ್ರಿಕರನ್ನು ಶೋಷಣೆಗೆ ಒಳಪಡಿಸುವ ಯಾವುದೇ ಘಟನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ⭕ಮಂಗಳೂರು: ಮೊಬೈಲ್‌ ಕಿತ್ತುಕೊಂಡ ಮನೆಯವರು

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೇಲೆ ಪೊಟ್ಟುಕುತಲ್ ( ವಿಭೂತಿ, ಸಿಂಧೂರ, ಅಥವಾ ಚಂದನ ಲೇಪಿಸುವುದು) ವಿಧಿವಿಧಾನ ಆಚರಣೆಗೆ ಶುಲ್ಕ ವಿಧಿಸುವ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ರಾಜ್ಯದ ತಿರುವಾಂಕೂರು ದೇವಸ್ವಂ ಮಂಡಳಿಗೆ ಆದೇಶಿಸಿದೆ. ಶಬರಿಮಲೆ ಯಾತ್ರಿಕರನ್ನು ಶೋಷಣೆಗೆ ಒಳಪಡಿಸುವ ಯಾವುದೇ ಘಟನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಯಾವುದೇ ಭಕ್ತರು ಅಥವಾ ಶಬರಿಮಲೆ ಯಾತ್ರಿಕರು ಯಾವುದೇ ವ್ಯಕ್ತಿಯಿಂದ ಶೋಷಣೆಗೆ ಒಳಗಾಗುವಂತಿಲ್ಲ ಎಂದು ಹೇಳಿದೆ.

ಶಬರಿಮಲೆಯ ವಿಶೇಷ ಆಯುಕ್ತರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಎಡತಾವಲಂಗಳ (ದೇವಾಲಯಗಳು) ಮೇಲೆ ನಿಗಾ ಇರಿಸಿರುವುದಾಗಿ ಅದು ತಿಳಿಸಿದೆ.


ಯಾತ್ರಾರ್ಥಿಗಳ ಮುಖ್ಯ ಮೂಲ ಶಿಬಿರವಾದ ಏರುಮೇಲಿಯಲ್ಲಿ ಪೊಟ್ಟುಕುತಲ್‌ಗಾಗಿ ಪ್ರತಿ ವ್ಯಕ್ತಿಗೆ ₹ 10 ಸಂಗ್ರಹಿಸಲು ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಿ ದೇವಸ್ವಂ ಮಂಡಳಿ ಈ ಹಿಂದೆ ಹೊರಡಿಸಿದ್ದ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Leave a Reply

Your email address will not be published. Required fields are marked *