ಮೇಷ ರಾಶಿ : ತಾಯಿಯ ಪ್ರೀತಿಯು ನಿಮಗೆ ಉತ್ಸಾಹವನ್ನು ಕೊಡುವುದು. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಪ್ರಿಯಕರನ ಜೊತೆ ಸುತ್ತಾಟ ಮಾಡುವಿರಿ. ಉದ್ಯೋಗದಲ್ಲಿ ಸಂತಸವಿರುವುದು. ಪ್ರೀತಿಯ ಮಾತಿನಿಂದ ಇಂದಿನ ನಿಮ್ಮ ಕೆಲಸವು ಆಗುವುದು.
ವೃಷಭ ರಾಶಿ : ನೇರ ಮಾತು ಕಹಿಯಾಗುವುದು. ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು ನಿಮಗೆ ಬೇಸರವನ್ನು ತರಿಸುವುದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸರಿಯಾದ ಮಾರ್ಗವನ್ನು ಹಾಕಿಕೊಡುವಿರಿ. ಅಪೂರ್ಣವಾಗಿರುವ ಕಛೇರಿಯ ಕೆಲಸಗಳು ಇಂದು ಮುಗಿಸುವ ಕೆಲಸವನ್ನು ಮಾಡುವಿರಿ.
ಮಿಥುನ ರಾಶಿ : ನಿಮ್ಮದೇ ಸರಿ ಎನ್ನುವ ಅಹಂಭಾವ ಬಿಟ್ಟರೆ ನೆಮ್ಮದಿಯೂ ನಿಮ್ಮದೇ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ. ದೂರ ಪ್ರಯಾಣವು ಸುಖಕರವಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ಸಲೀಸಾಗಿ ಮುಗಿಯುವುದು. ಕೃಷಿಯಲ್ಲಿ ತೊಡಗಿಕೊಂಡವರು ಹೊಸ ಆವಿಷ್ಕಾರವನ್ನು ಮಾಡುವರು. ನಿಮ್ಮ ವಿಶ್ವಾಸಕ್ಕೆ ಸರಿಯಾದ ಫಲಿತಾಂಶವು ಸಿಗುವುದು. ಗೆಳೆತನವು ಕಲಹದಲ್ಲಿ ಮುಕ್ತಾಯವಾಗುವುದು.
ಕರ್ಕಾಟಕ ರಾಶಿ : ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಬಹುದು. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಕಲಾವಿದರಿಗೆ ವೃತ್ತಿಯಲ್ಲಿ ಗೌರವ ಸಿಗುವುದು. ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವಿರಿ. ಕಛೇರಿಯ ಒತ್ತಡದ ಕೆಲವು ನಿಮಗೆ ಕಷ್ಟವಾದೀತು. ಗೆಲುವು ನಿಮ್ಮದಾದರೂ ಗೆಲ್ಲುವ ದಾರಿ ನಿಮ್ಮದಲ್ಲ.
ಸಿಂಹ ರಾಶಿ : ಧಾರ್ಮಿಕ ಮುಖಂಡರ ಅಧಿಕಾರದ ವಿಚಾರದಲ್ಲಿ ಗೊಂದಲ ಉಂಟಾಗುವುದು. ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೀವು ಉಢಾಫೆ ಮಾಡುವ ಸಂಗತಿಗಳೇ ನಿಮಗೆ ಅಂಟಿಕೊಳ್ಳುವುದು. ನಿಮ್ಮ ಯೋಜನೆಯ ಕೆಲಸಗಳಿಗೆ ವಿಘ್ನಗಳು ಬರುವುದು. ಸರಿಯಾದ ಮಾಹಿತಿಯ ಕೊರತೆ ಕಾಣುವುದು. ಯಾರೂ ನಿಮಗೆ ಸರಿಯಾಗಿ ಸ್ಪಂದಿಸದೇ ಇರುವವರು. ನೇರವಾದ ಮಾತು ನಿಮಗೆ ಖುಷಿಕೊಡಬಹುದು.
ಕನ್ಯಾ ರಾಶಿ : ಬೇಕಾದಷ್ಟು ವಿಶ್ರಾಂತಿ ಪಡೆದು ಕಾರ್ಯದಲ್ಲಿ ಪ್ರವೃತ್ತರಾಗಿ. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ಮಕ್ಕಳ ವಿವಾಹಕ್ಕೆ ನೀವು ತಿರುಗಾಟ ಮಾಡಬೇಕಾಗಬಹುದು. ನಿಮ್ಮ ಶಿಸ್ತಿನ ಕೆಲಸಕ್ಕೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ನಿಮ್ಮ ವರ್ತನೆಯಿಂದ ಬಂಧುಗಳು ಅಸಮಾಧಾನಗೊಳ್ಳುವರು.
ತುಲಾ ರಾಶಿ : ನಿಮ್ಮ ಮರೆವಿನಿಂದ ಕೆಲವು ಮುಖ್ಯವಾದ ವಸ್ತುವನ್ನೇ ಕಳೆದುಕೊಳ್ಳಬಹುದು. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ರಾಜಕೀಯವನ್ನೇ ತಮ್ಮ ಕಾರ್ಯಕ್ಷೇತ್ರವನ್ನು ಮಾಡಿಕೊಂಡವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಎಲ್ಲವನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸದರೂ ಅಲ್ಪ ಲಾಭವಾಗುವುದು.
ವೃಶ್ಚಿಕ ರಾಶಿ : ಏಕಾಗ್ರತೆಯನ್ನು ನೀವು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಜವಾಬ್ದಾರಿಗಳು ನಿಮಗೆ ಭಾರವೆನಿಸಿ ಅದನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ನಿಮಗೆ ಸಿಕ್ಕ ಜವಾಬ್ದಾರಿಗಳು ಅಸಮಾಧಾನವನ್ನು ಉಂಟುಮಾಡುವುದು. ಯಾರ ಜೊತೆಯೂ ಬೆರೆಯುವ ಮನಸ್ಸಾಗದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಮಯ ಬೇಕಾಗುವುದು.
ಧನು ರಾಶಿ : ನಿಮ್ಮ ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಅಜಾಡ್ಯದಿಂದ ನಿಮ್ಮ ಕಾರ್ಯವನ್ನು ಸಾಧಿಸಬಹುದು.
ಮಕರ ರಾಶಿ : ನಿಮ್ಮ ದೃಷ್ಟಿಯು ಬದಲಾದರೆ ಎಲ್ಲವೂ ಬದಲಾಗುವುದು. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನೀವು ಸಫಲರಾಗುವಿರಿ. ಸ್ನೇಹಿತರ ಜೊತೆ ಅನೌಪಚಾರಿಕ ಮಾತುಗಳನ್ನು ಆಡುವಿರಿ. ಸಹವಾಸದೋಷದಿಂದ ನಿಮಗೆ ಕಷ್ಟವಾದೀತು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ.
ಕುಂಭ ರಾಶಿ : ಗೊತ್ತಿಲ್ಲದ ವ್ಯವಹಾರದಿಂದ ನಿಮಗೆ ಮುಖಭಂಗವಾಗಬಹುದು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಸಂಭ್ರಮದ ವಾತಾವರಣದಲ್ಲಿ ಸಮಯವನ್ನು ಕಳೆಯುವಿರಿ. ಅನಗತ್ಯ ಮಧ್ಯಪ್ರವೇಶದಿಂದ ಗೌರವ ಕಡಿಮೆಯಾಗುವುದು. ಮನೆಯ ಕೆಲಸವು ಅಧಿಕವಾಗಿ ಆಯಾಸವಾಗಬಹುದು.
ಮೀನ ರಾಶಿ : ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಸ್ನೇಹಿತರನ್ನು ರಕ್ಷಿಸಲು ಹೋಗಿ ನೀವು ಅಪಾಯಕ್ಕೆ ಸಿಲುಕುವಿರಿ. ಅನಿರೀಕ್ಷಿತ ಧನಲಾಭವು ಸಂತೋಷವನ್ನು ಕೊಡುವುದು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸಬಹುದು. ನಿಮಗೆ ಸಿಗದಿರುವ ವಸ್ತುವು ಯಾರಿಗೂ ಸಿಗಬಾರದು ಎಂಬ ಹಠದ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ.