ಬೆಳ್ತಂಗಡಿ:(ಅ.14) ಅಕ್ಟೋಬರ್ 13 ರಂದು ಸುರಿದ ಭಾರೀ ಮಳೆಗೆ ಕಲ್ಮಂಜ ಗ್ರಾಮದ ಮಾಣಿಂಜೆ ಹಾಗೂ ಮುಂಡಾಜೆ ಗ್ರಾಮದ ಗುಂಡಿ ದೇವಸ್ಥಾನ ಹಾಗೂ ಪಿಲತ್ತಡ್ಕ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಮಣ್ಣು ತುಂಬಿಕೊಂಡಿದೆ.
ಇದನ್ನೂ ಓದಿ: 🐍ಚಾರ್ಮಾಡಿ : ಕಾಳಿಂಗ ಮರಿಯನ್ನು ತಿಂದು ತೇಗಿದ ಬೃಹದಾಕಾರದ ಕಾಳಿಂಗ ಸರ್ಪ…!
ಈ ಮಾರ್ಗವು ಚಿಕ್ಕಮಗಳೂರು ಜಿಲ್ಲೆಯಿಂದ ಚಾರ್ಮಾಡಿ ಘಾಟ್ ಮೂಲಕ ಧರ್ಮಸ್ಥಳ ಸಂಪರ್ಕಿಸುವ ಸುಗಮ ವ್ಯವಸ್ಥೆಯಾಗಿದ್ದು, ಆದರೆ ಈಗ ವಾಹನ ಸವಾರರು ಪರದಾಡುವಂತಾಗಿದೆ.