ಉಜಿರೆ:(ಅ.15) ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ- ಉದ್ಯೋಗ ಆಕಾಂಕ್ಷಿಗಳಿಗೆ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿಯು ಅ.21 ರಿಂದ ಅ.30 ರವರೆಗೆ ನಡೆಯಲಿದೆ.
ಇದನ್ನೂ ಓದಿ: 🛑ಕೋವಿಡ್ ಲಸಿಕೆ ಅಡ್ಡಪರಿಣಾಮಗಳ ತನಿಖೆಗೆ ಮನವಿ
ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 5.00ರವರೆಗೆ ತರಬೇತಿ ನಡೆಯುತ್ತದೆ. ಪ್ರತಿ ದಿನ ಮನೆಗೆ ಹೋಗಿ ಬರಲು ಅವಕಾಶವಿರುತ್ತದೆ ಹಾಗೂ ವಸತಿ, ಊಟ, ತರಬೇತಿ ಉಚಿತವಾಗಿದ್ದು 18-45 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ.
ಭಾಗವಹಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/Z2xPLE1FigamcMBd9
ಹೆಚ್ಚಿನ ಮಾಹಿತಿಗಾಗಿ 6364561982 ಹಾಗೂ ಸಂಸ್ಥೆಯ ವೆಬ್ ಸೈಟ್ನ್ನು ಸಂಪರ್ಕಿಸಿ.
http://www.rudsetitraining.org