Wed. Nov 20th, 2024

ಮೇಷ ರಾಶಿ : ಮಕ್ಕಳ ಭವಿಷ್ಯಕ್ಕೆ ಸಂಪತ್ತು ಮಾಡುವ ಯೋಚನೆ ಬರುವುದು. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಪತ್ನಿಯ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವಿರಿ. ಇದಕ್ಕಾಗಿ ವಾಗ್ವಾದವು ನಡೆಯಬಹುದು. ಮಕ್ಕಳನ್ನು ನಿರ್ಲಕ್ಷಿಸಿದರೆ ಕಷ್ಟವಾದೀತು. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಕಾದೀತು. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳದೇ ಪರಿಚಿತರನ್ನು ಕೇಳಿ.

ವೃಷಭ ರಾಶಿ : ಹಿರಿಯರ ಮೇಲಿನ ಪ್ರೀತಿಯಿಂದ ನೀವು ಸೇವೆ ಮಾಡುವಿರಿ. ನಿಮ್ಮ ಸ್ಥಾನದ ರಕ್ಷಣೆಗಾಗಿ ಇನ್ನೊಬ್ಬರ ಮೇಲೆ ಆರೋಪವನ್ನು ಮಾಡುವಿರಿ. ಕೆಲವು ಕೆಲಸಗಳಿಗೆ ನೀವು ಆಲಸ್ಯವನ್ನು ತೋರುವಿರಿ. ನಿಮ್ಮ ಸಂಕಟಕ್ಕೆ ಸ್ಪಂದಿಸಿದವರನ್ನು ನೀವು ಗೌರವಿಸಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯ ಕೊರತೆ ಕಾಣಿಸುವುದು. ನಕಾರಾತ್ಮಕ ಆಲೋಚನೆಯನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಮಿಥುನ ರಾಶಿ : ಹಣವು ತಿರುಗಿ ಬರುವುದು ನಿಮಗೆ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಿಂದ ನಿಮಗೆ ಅಪವಾದವು ಬರಬಹುದು. ದಾಂಪತ್ಯದಲ್ಲಿ ಅನಗತ್ಯ ವಾಗ್ವಾದಗಳು ನಡೆಯಬಹುದು. ಕುಟುಂಬದಲ್ಲಿ ಕೆಲವು ವಿಷಯಗಳನ್ನು ನಿಮಗೆ ಹೇಳದೇ ರಹಸ್ಯವಾಗಿ ಇಡುವರು. ಯಾರದೋ ಸಿಟ್ಟನ್ನು ಇನ್ನಾರದೋ ಮೇಲೆ ತೀರಿಸಿಕೊಳ್ಳುವಿರಿ. ಹಿತಶತ್ರುಗಳ ಬಾಧೆಯಿಂದ ತಪ್ಪಿಸಿಕೊಳ್ಳುವ ತನಕ ನಿಮ್ಮ ಯಾವ ಉದ್ಯೋಗವೂ ಊರ್ಜಿತವಾಗದು.

ಕರ್ಕಾಟಕ ರಾಶಿ : ಹಳೆಯ ಪ್ರೀತಿಯಿಂದ ನಿಮಗೆ ಕಷ್ಟವಾದೀತು. ನೀವು ಅಂದುಕೊಂಡ ಕೆಲಸವು ಆಗದೇಹೋದೀತು.ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಚರ್ಚೆಯು ನಡೆಯಬಹುದು. ವಾಹನ ಚಲಾಯಿಸಲು ನಿಮಗೆ ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಎತ್ತಿಹೇಳಬಹುದು. ಸಾಹಿತ್ಯದ ಆಸಕ್ತರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ವ್ಯರ್ಥ. ಬುದ್ಧಿಯನ್ನು ಬಳಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ.

ಸಿಂಹ ರಾಶಿ : ನೀವು ಕೈಗೊಂಡ ಪ್ರಯಾಣವು ಸುಖಕರವಾಗದೇ ಇರಬಹುದು. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಆಡಳಿತಕ್ಕೆ ಸಂಬಂಧಿಸಿದಂತೆ ಲೋಪ ದೋಷಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭವನ್ನು ಎದುರಿಸುವಾಗ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಗೊಂದಲವು ಬರಬಹುದು. ಆಪ್ತರ ಜೊತೆಗಿನ ಒಡನಾಟವು ನಿಮ್ಮ ಭಾರವಾದ ಮನಸ್ಸನ್ನು ಹಗುರಗೊಳಿಸುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಕಡಿಮೆ ಇರಬಹುದು.

ಕನ್ಯಾ ರಾಶಿ : ಆರ್ಥಿಕ ತೊಂದರೆಯನ್ನು ನೀವು ಸಲೀಸಾಗಿ ಸರಿಮಾಡಿಕೊಳ್ಳುವಿರಿ. ಸಮಯ ಹಾಗೂ ಸಂದರ್ಭಗಳನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳಿ. ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡುವುದು. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಅತಿಯಾದ ಶ್ರದ್ಧೆಯು ಬರುವುದು. ನಿಮ್ಮದಲ್ಲದ ವಸ್ತುಗಳನ್ನು ನೀವು ಇಟ್ಟುಕೊಳ್ಳದೇ ಹಿಂದಿರುಗಿಸಿ.

ತುಲಾ ರಾಶಿ : ಅಪರಿಚಿತ ಕರೆಗಳಿಂದ ನಿಮಗೆ ಭಯವಾಗಬಹುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗದೇ ಇರುವುದು ನಿಮ್ಮನ್ನು ಖಿನ್ನಗೊಳಿಸೀತು. ಋಣ ಬಾಧೆಯು ಮುಕ್ತಾಯವಾಯಿತು ಎನ್ನುತ್ತಿದ್ದಂತೆ ಇನ್ನೊಂದು ಆರಂಭವಾಗುವುದು. ಬಂಧುಗಳಿಂದ, ಮನೆಯ ಹಿರಿಯರಿಂದ ನೀವು ಅಲಕ್ಷ್ಯಕ್ಕೆ ಒಳಗಾಗುವಿರಿ. ಇದು ನಿಮಗೆ ಬಹಳ ಬೇಸರವನ್ನು ತರಿಸುವುದು. ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ.

ವೃಶ್ಚಿಕ ರಾಶಿ : ಯಾವುದಾದರೂ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಇನ್ನೊಬ್ಬರಿಂದ ಪ್ರೇರಿತರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಆರ್ಥಿಕತೆಯ ಮೇಲೆ ನಿಮಗೆ ಮೋಹವು ಕಡಿಮೆ ಆಗಬಹುದು. ವಂಚನೆಗೆ ಪ್ರತಿವಂಚನೆಯನ್ನು ಮಾಡುವ ಬುದ್ಧಿಯು ಬರಬಹುದು. ಆಶಿಸ್ತಿನ ಕೆಲಸಕ್ಕೆ ಹಿರಿಯರಿಂದ ಬೈಸಿಕೊಳ್ಳುವಿರಿ. ಅಪರಿಚಿತ ವ್ಯಕ್ತಿಯಿಂದ ತೊಂದರೆಗಳು ಎದುರಾಗಬಹುದು.

ಧನು ರಾಶಿ : ಕೌಟುಂಬಿಕ ಜವಾಬ್ದಾರಿಗಳು ಬರಬಹುದು.‌ ನಿಮ್ಮ ಕಾರ್ಯಕ್ಕೆ ಹೆಚ್ಚಿನ ವೇತನವು ಸಿಗಬಹುದು. ಅನಗತ್ಯ ಖರ್ಚನ್ನು ಮಾಡಬೇಕಾಗಬಹುದು. ದೂರದ ಬಂಧುಗಳ ಭೇಟಿಯು ಸಂತಸವನ್ನು ಕೊಡಬಹುದು. ಎದುರಿನವರ ಜೊತೆ ನಿಮ್ಮದೇ ಸರಿ ಎಂಬಂತೆ ತಪ್ಪಿದ್ದರೂ ವಾದಿಸುವಿರಿ. ಶತ್ರುಗಳನ್ನು ತಿಳಿದುಕೊಳ್ಳುವ ಅಶಕ್ತಿಯು ನಿಮಗೆ ಇರುವುದು. ಆತುರದಿಂದ ಯಾವ ವ್ಯವಹಾರವನ್ನೂ ಮಾಡುವುದು ಬೇಡ.

ಮಕರ ರಾಶಿ : ನಿಮ್ಮಿಂದ ಉಪಕಾರ ಪಡೆದವರು ಕೃತಜ್ಞತೆ ಸಲ್ಲಿಸಬಹುದು. ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ನಿಮ್ಮ ಮಾತಿನ ಹಾಸ್ಯವು ಇನ್ನೊಬ್ಬರಿಗೆ ನೋವನ್ನು ಮಾಡೀತು. ಆಕಸ್ಮಿಕ ಧನಲಾಭದ ನಿರೀಕ್ಷೆಯಲ್ಲಿ ಇರುವಿರಿ. ಉದ್ಯೋಗದ ಕಾರಣ ಹೊರಗಡೆ ಹೋಗಬೇಕಾಗಬಹುದು. ನಿಷ್ಠುರ ನಡತೆಯ ಕಾರಣ ನೀವು ಎಲ್ಲರಿಂದ ದೂರವಿರಬೇಕಾಗಬಹುದು. ನಿಮ್ಮದೇ ಕೆಲಸಗಳನ್ನು ಮಾಡುತ್ತ ಆರಾಮಾಗಿ ದಿನವನ್ನು ಕಳೆಯುವಿರಿ.

ಕುಂಭ ರಾಶಿ : ದೈವಭಕ್ತಿಯಿಂದ ನೀವು ನೆಮ್ಮದಿ ಕಾಣಲು ಸಾಧ್ಯ. ಇಂದು ಹೆಚ್ಚು ಮಾನಸಿಕ ಒತ್ತಡವು ಇರದಿದ್ದರೂ ಕೆಲಸವು ಬಹಳ ಇರಲಿದೆ. ಒಂದು ಕ್ಷಣವೂ ವಿರಾವಿಲ್ಲದಂತೆ ಕಾರ್ಯವನ್ನು ಮಾಡುವಿರಿ. ಇಷ್ಟವಿಲ್ಲದ ಕಾರ್ಯಕ್ಕೆ ಎಷ್ಟೇ ಒತ್ತಾಯ ಮಾಡಿದರೂ ನೀವು ಒಪ್ಪುವುದಿಲ್ಲ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಲು ನೀವು ಬಯಸುವಿರಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ.

ಮೀನ ರಾಶಿ : ಉದ್ಯೋಗ ಬದಲಾವಣೆಯು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ತೆಗೆದುಕೊಳ್ಳುವಿರಿ. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವನ್ನು ಮಾಡಬೇಕಾದೀತು. ಅಪರಿಚಿತರು ಆಪ್ತರಾಗಬಹುದು ಮಾತುಕತೆಯಿಂದ.‌ ದುರಭ್ಯಾಸಕ್ಕೆ ಅವಕಾಶಗಳು ಬರಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ವರ್ತನೆಯನ್ನು ಯಾರಾದರೂ ಕಂಡು ನಕ್ಕಾರು. ಅಹಂಕಾರವು ನಿಮ್ಮನ್ನೇ ನುಂಗಬಹುದು.

Leave a Reply

Your email address will not be published. Required fields are marked *