ಉಜಿರೆ: (ಅ.16) ಆರೋಗ್ಯಕರ ಜೀವನಕ್ಕೆ ಕೈಯ ಶುಚಿತ್ವವೂ ಕೂಡ ಅತೀಮುಖ್ಯ. ಇತ್ತೀಚಿನ ವರದಿಯ ಪ್ರಕಾರ ಕೈಯ ಅಸುರಕ್ಷತೆಯಿಂದ ಪ್ರತಿ ವರ್ಷ 3.5 ಮಿಲಿಯನ್ ಮಕ್ಕಳು ಸಾವಿಗೀಡಾಗುತ್ತಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ನಜ್ಜುಗುಜ್ಜಾದ ಕಾರು
ಡಯೇರಿಯಾ ಹಾಗೂ ನ್ಯೂಮೆನಿಯಾದಂತಹ ಕಾಯಿಲೆಗಳು ಕೈ ತೊಳೆಯದೆ ಆಹಾರ ಸೇವಿಸುವುದರಿಂದ ಬರುತ್ತವೆ. ಈಗ ಕೊರೋನ ವೈರಸ್ ಕೂಡ ಸೇರ್ಪಡೆಯಾಗಿದೆ. ಕೈಯ ಅಸುರಕ್ಷತೆ ಬಗ್ಗೆ ಕಳವಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯು 2008 ರಿಂದ ವಿಶ್ವ ಕೈ ತೊಳೆಯುವ ದಿನವನ್ನಾಗಿ ಘೋಷಿಸಿದೆ.
ಇದೀಗ ಸುಮಾರು 70 ದೇಶಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಕೈ ತೊಳೆಯುವ ದಿನದಂದು ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನಗಳ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ವಿಶ್ವ ಕೈ ತೊಳೆಯುವ ದಿನಾಚರಣೆ ಪ್ರಯುಕ್ತ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು.
ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.
ಶ್ರೀಹರಿ ಹಾಗೂ ಗೌತಮಿ ಜಿ. ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು. ಘಟಕದ ನಾಯಕ ಆದಿತ್ಯ ವಿ. ಸ್ವಾಗತಿಸಿ , ವಂದಿಸಿದರು.