Wed. Nov 20th, 2024

Venur: ಡ್ರಾಪ್‌ ಮಾಡ್ತೇನೆಂದು ಆಸೆ ತೋರಿಸಿ ಮೊಬೈಲ್‌ ನಂಬರಿಗೆ ಡಿಮ್ಯಾಂಡ್‌!! – ಧೈರ್ಯ ಕಳೆದುಕೊಳ್ಳದೆ ಯುವಕನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ!! – ಅಷ್ಟಕ್ಕೂ ಜಮಾಲ್‌ ಪೋಲಿಸರ ಕೈಗೆ ಸಿಕ್ಕಿಬಿದ್ದದ್ದು ಹೇಗೆ?!

ವೇಣೂರು:(ಅ.16) ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಮೊಬೈಲ್ ನಂಬರಿಗೆ ಒತ್ತಾಯಿಸಿದ್ದ ಯುವಕನೊಬ್ಬನನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ನೆರವಿನಿಂದ ವೇಣೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: 🛑ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಹತ್ತರದ ಪ್ರಕಟಣೆ .! ಏನು .?

ವೇಣೂರಿನ ಗೋಳಿಯಂಗಡಿಯಲ್ಲಿರುವ ಪ್ರತಿಷ್ಠಿತ ಐ ಟಿ ಐ ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದಗಳಿಂದ ಮಾತನಾಡುತ್ತಾ, ನಿನ್ನ ಮೊಬೈಲ್ ನಂಬರ್ ಕೊಡು, ಪ್ರತಿದಿನ ಬೈಕಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡುತ್ತೇನೆ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಗಾಬರಿಗೊಂಡ ಯುವತಿ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ತಿಳಿಸಿದ್ದಾಳೆ.

ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ವೇಣೂರು ಠಾಣಾಧಿಕಾರಿ ಶ್ರೀಶೈಲ ನೇತೃತ್ವದಲ್ಲಿ ಪೊಲೀಸರು ಬಂಟ್ವಾಳ ಸಜೀಪದ ಹುಲ್ಲು ತೆಗೆಯುವ ಮಿಶಿನ್ ರಿಪೇರಿ ಕೆಲಸ ಮಾಡುವ ಜಮಾಲ್‌ನನ್ನು ಬಂಧಿಸಿದ್ದಾರೆ.
ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *