ಬೆಳ್ತಂಗಡಿ:(ಅ.16) ವಕೀಲರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ಬೆಳ್ತಂಗಡಿ ವತಿಯಿಂದ ವಕೀಲರ ಭವನದಲ್ಲಿ “ಸೇಫ್ಟಿ ಕ್ಲಿನಿಕ್” ಕಾರ್ಯಾಗಾರ ನಡೆಯಿತು.
ಇದನ್ನೂ ಓದಿ: ⭕ತನ್ನದೇ ಫಸ್ಟ್ ನೈಟ್ ವಿಡಿಯೋ ತೋರಿಸಿ ಪತಿಯಿಂದ ಪತ್ನಿಗೆ ಬ್ಲ್ಯಾಕ್ ಮೇಲ್!!
ಈ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಬೆಳ್ತಂಗಡಿ ಶ್ರೀ ಮಂಜು ಇಂಡಿಯನ್ ಗ್ಯಾಸ್ ಇದರ ಶಿವಕುಮಾರ್ ಇವರು ಸವಿವರ ಮಾಹಿತಿಯನ್ನು ನೀಡಿದರು.
ರಿಜಿನಲ್ ಮ್ಯಾನೇಜರ್ ಆದ ಗೀತಾ ಮೋಹನ್ ಇವರು ಗ್ಯಾಸ್ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಮಂಜು ಇಂಡಿಯನ್ ಗ್ಯಾಸ್ ವತಿಯಿಂದ ಸೇಫ್ಟಿ ಉಪಕರಣಗಳನ್ನು ವಿತರಿಸಲಾಯಿತು.