ಮೇಷ ರಾಶಿ :ಇಂದು ಮನೆಯಿಂದ ದೂರವಿರಬೇಕಾದ ಸ್ಥಿತಿ ಬರುವುದು. ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ಸಂತೋಷದಿಂದ ಇರುತ್ತಾರೆ. ಉನ್ನತಸ್ಥಾನದ ಪ್ರಾಪ್ತಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಆಪ್ತರ ನಡುವೆ ಸಂದೇಹವು ಬರುವ ಸಂಭವವಿದೆ. ಯಾರದೋ ಮಾತಿಗೆ ನಿಮ್ಮ ಪ್ರತಿಕ್ರಿಯೆ ಸಲ್ಲದು. ನೂತನ ಗೃಹನಿರ್ಮಾಣದ ಕಾರ್ಯಕ್ಕೆ ದೊಡ್ಡ ಯೋಜನೆಯನ್ನು ರೂಪಿಸುವಿರಿ.
ವೃಷಭ ರಾಶಿ :ಇಂದು ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮದಾದ ಪೂರ್ವಯೋಜನೆ ಇರಲಿ. ನಿಮ್ಮ ಕಷ್ಟಕ್ಕೆ ಯಾರೂ ಬರದಿರುವುದು ನಿಮಗೆ ಬೇಸರವನ್ನು ತರಿಸಬಹುದು. ಮನೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರಬಹುದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಪೂರ್ಣವಿಶ್ವಾಸವು ಇರದು. ನಿಮ್ಮ ನೆಮ್ಮದಿಯನ್ನು ಪರರು ಸಹಿಸಲಾರರು. ಯಾವುದಾದರೂ ಆಮಿಷಕ್ಕೆ ಬಲಿಯಾಗಿ ಕಾನೂನಿಗೆ ವಿರುದ್ಧವಾದ ಕಾರ್ಯದಲ್ಲಿ ತೊಡಗುವಿರಿ.
ಮಿಥುನ ರಾಶಿ :ಅಪ್ರಾಮಾಣಿಕತೆಯಿಂದ ಆದ ಲಾಭವು ಸದ್ಯಕ್ಕೆ ಸಂತೋಷವನ್ನು ಕೊಡುವುದು. ಮಕ್ಕಳ ಮೇಲೆ ಪ್ರೀತಿ ಇದ್ದರೂ ಹುಸಿ ಮುನಿಸು ಅಗತ್ಯವಾಗಿ ಬೇಕು. ನಿಮ್ಮ ಅಧಿಕ ಶ್ರಮದಿಂದ ನಿಮಗೇ ಯಶಸ್ಸು ಸಿಗುವುದು. ಸ್ವಲ್ಪಮಟ್ಟಿಗೆ ಆಯಾಸವೂ ಆಗುವುದು. ಸಜ್ಜನರ ಅಕಸ್ಮಾತ್ ಭೇಟಿಯಾಗುವುದು. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿ ಇರುವಿರಿ. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಯಾಚಿಸಿ. ಸರಳವಾದ ಕಾರ್ಯವನ್ನು ಕಷ್ಟವಾಗಿಸಿಕೊಳ್ಳುವುದು ಬೇಡ.
ಕರ್ಕಾಟಕ ರಾಶಿ :ಅನ್ಯರ ದೋಷವನ್ನೇ ಹುಡುಕುತ್ತ ಇರುವುದು ಸರಿಯಾಗದು. ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ವೃತ್ತಿಯ ಸ್ಥಳದಲ್ಲಿ ನೀವು ಇಂದು ಖುಷಿಯಿಂದ ಇರುವಿರಿ. ನೀವಾಡುವ ಮಾತು ಸರಳವೂ ಸ್ಪಷ್ಟವಾಗಿ ಆಗಿರಲಿ. ಆಗ ಮಾತ್ರ ನಿಮ್ಮ ಮಾತನ್ನು ಆಲಿಸುವರು. ನಿಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವಿರಿ. ಆಸ್ತಿಯನ್ನು ಸ್ವಾಯತ್ತ ಮಾಡಿಕೊಳ್ಳಲು ಏನಾದರೂ ತಂತ್ರವನ್ನು ಹೂಡುವಿರಿ.
ಸಿಂಹ ರಾಶಿ :ಅಪರಿಚಿತರ ಮಾತಿಗೆ ಮನಸೋಲುವಿರಿ. ಪ್ರೀತಿ ಶುರುವಾಗಬಹುದು. ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ಈ ಓಡಾಟದಿಂದ ಆಯಾಸ ಹೆಚ್ಚಾಗುವುದು. ಪರಪುರುಷರಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮ ಇಂದಿನ ಕೆಲಸವು ಗೊಂದಲದಿಂದ ಕೂಡಿರಲಿದೆ. ಸಂಪತ್ತಿದ್ದರೂ ಅದನ್ನು ಸದುಪಯೋಗ ಮಾಡುವ ಮಾರ್ಗವು ಗೊತ್ತಾಗದೇ ಇರಬಹುದು. ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಮೇಲೆ ದ್ವೇಷ ಸಾಧಿಸಲು ಹೋಗುವುದು ಸರಿಯಲ್ಲ.
ಕನ್ಯಾ ರಾಶಿ :ಸಂಗಾತಿಯನ್ನು ಸಂಭಾಳಿಸಲು ಸೋಲಾಗಬಹುದು. ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ಕೆಲವರಿಗೆ ನಿಮ್ಮ ವರ್ತನೆಯು ಇಷ್ಟವಾಗದೇ ಇರಬಹುದು. ಎಂದೋ ಆಡಿದ ಮಾತಿನ ದುಷ್ಪರಿಣಾಮವು ಇಂದು ಹೊತ್ತಾಗುವುದು. ಆಸಮಯದಲ್ಲಿ ಭೋಜನವನ್ನು ಮಾಡುವುದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು.
ತುಲಾ ರಾಶಿ :ಮೆಚ್ಚುಗೆಗಾಗಿ ಮಾಡುವ ಕೆಲಸವು ವ್ಯರ್ಥವಾಗುವುದು. ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ನಿಮಗೆ ಮೊದಲೇ ಸರಿ ಎನಿಸಿದ್ದು ಈಗ ತಪ್ಪು ಎಂದು ಅರಿವಿಗೆ ಬರುವುದು. ನೀವು ಸರಿಯಾದ ಮಾರ್ಗದರ್ಶನವನ್ನು ಪಡೆಯುವುದು ಮುಖ್ಯ. ಜೀರ್ಣವಾಗದ ಆಹಾರದಿಂದ ಸಂಕಟವಾಗುವುದು. ಯಾರು ಏನಂದುಕೊಳ್ಳುತ್ತಾರೇನೋ ಎಂಬ ಹಿಂಜರಿಕೆ ಬೇಡ. ಭೋಗ ವಸ್ತುಗಳಗೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ.
ವೃಶ್ಚಿಕ ರಾಶಿ :ನಿಮ್ಮ ಗೃಹ ನಿರ್ಮಾಣಕ್ಕೆ ಯಾರಿಂದಲಾದರೂ ಸಹಕಾರ ಸಿಗಲಿದೆ. ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನು ತರುವುದು. ಆಯಾಸಕರವಾದ ಕಛೇರಿಯ ಕೆಲಸವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿ ಇರುವುದು. ಒಂದೇ ರೀತಿಯ ದಿನಚರಿಯನ್ನು ಕಂಡು ಸ್ತ್ರೀಯರು ಹೊಸ ಪಾಕದತ್ತ ಹೆಚ್ಚಿನ ಒಲವು ತೋರಿಸುವರು. ದಾಂಪತ್ಯದಲ್ಲಿ ಹೊಂದಾಣಿಕೆಯೇ ಹೆಚ್ಚಾಗಿ ಇರುವುದು. ಯಾರನ್ನೂ ಯಾರೂ ಬಿಟ್ಟುಕೊಡದ ಸ್ಥಿತಿಯು ಬರಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಮುಂದುವರಿಸಿ.
ಧನು ರಾಶಿ :ಅನಪೇಕ್ಷಿತ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದು ಬೇಡ. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಅತಿಯಾದ ಆತ್ಮವಿಶ್ವಾಸವೇ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲುವಂತೆ ಮಾಡುವುದು. ವ್ಯಾಪಾರದಲ್ಲಿ ಚುರುಕುತನದ ಅವಶ್ಯಕತೆ ಹೆಚ್ಚು ಇರಬೇಕಾಗುವುದು. ಮಾತು ಸರಳವೂ ನೇರವೂ ಆಗಿರಲಿ. ಹೊಸ ಮನೆಗೆ ಹೋಗುವ ಯೋಚನೆ ಇರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಸರಿಯಾಗಿರದೇ ಹೋಗಬಹುದು. ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ.
ಮಕರ ರಾಶಿ :ವ್ಯವಹಾರದ ನಷ್ಟವನ್ನು ತುಂಬಿಕೊಳ್ಳಲು ಬೇಕಾದ ಯೋಜನೆ ಮಾಡುವಿರಿ. ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಪ್ರಯಾಣದ ಆಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಪ್ರೀತಿಗಾಗಿ ಕೆಲವನ್ನು ತ್ಯಾಗ ಮಾಡಬೇಕು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಎಲ್ಲವನ್ನೂ ನೀವು ಚಿಂತೆಯಿಂದ ಇರುವಿರಿ.ನಿಮ್ಮ ನಿರಂತರ ಪರಿಶ್ರಮದಿಂದ ನಿಮಗೆ ಕಾರ್ಯವು ಸಫಲವಾಗುವುದು. ಕೆಲಸದ ಹಿಂದೆ ಬಿದ್ದು ಆಗಬೇಕಾದುದನ್ನು ಮಾಡಿಕೊಳ್ಳುವಿರಿ. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ.
ಕುಂಭ ರಾಶಿ :ಹಣದ ಹಂಚಿಕೆಯಲ್ಲಿ ನಿಮಗೆ ಕಲಹವಾಗುವುದು. ಕಾರ್ಯದಲ್ಲಿ ಒತ್ತಡವು ಅಧಿಕವಾಗಿ ಇರುವುದು. ಖರ್ಚಿಗೆ ಕಡಿವಾಣ ಹಾಕುವುದು ಕಷ್ಟವಾದೀತು. ಶತ್ರುಗಳ ವಿರುದ್ಧ ವಿಜಯ ಸಾಧಿಸುವ ಸಾಧ್ಯತೆ ಇದೆ. ಅಬಲರ ಮೇಲೆ ನಿಮ್ಮ ಸಿಟ್ಟನ್ನು ತೋರಿಸುವಿರಿ. ನಿರುದ್ಯೋಗವು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ನಿಮಗೆ ಕಷ್ಟವಾದೀತು. ವ್ಯಾಪಾರದಲ್ಲಿ ನಮಗೆ ಮೋಸವಾಗುವ ಸಾಧ್ಯತೆ ಇದೆ. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು ನಿಮಗೆ ಕೀರ್ತಿಯನ್ನು ತಂದುಕೊಡುವುದು.
ಮೀನ ರಾಶಿ :ಇಂದು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ಏನನ್ನೋ ಯೋಚಿಸುತ್ತಲೇ ಇರುವಿರಿ. ನಿಮ್ಮದಾದ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ಪೂರ್ಣ ವಿಶ್ವಾಸ ಬರುವವರೆಗೂ ಏನನ್ನೂ ಮಾಡಲಾರಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಇರಲಿದೆ. ಇನ್ನೊಬ್ಬರನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಳ್ಳುವಿರಿ. ಸಂಗಾತಿಯಿಂದ ಬಂದ ಕೆಲವು ಮಾತುಗಳು ನಿಮಗೆ ಬೇಸರವನ್ನು ತರಿಸಬಹುದು.