Anushree:(ಅ.19) ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳನ್ನು ನೀವು ನೋಡಿರುತ್ತೀರಿ, ಇದೀಗ ಮತ್ತೆ ಅನುಶ್ರೀ ಅವರ ಮದುವೆ ಬಗ್ಗೆ ಸುದ್ದಿಯಾಗಿದೆ.
ಇದನ್ನೂ ಓದಿ: 🟠ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯ , ಶಿಶಿರ್ ರೊಮ್ಯಾನ್ಸ್
ಅನುಶ್ರೀ ಮದುವೆಯಾಗಲು ಗ್ರೀನ್ ಸಿಗ್ನಲ್ ನೀಡುತ್ತಿದ್ದು, ದಾಂಪತ್ಯ ಜೀವನದತ್ತ ಒಲವು ತೋರುತ್ತಿದ್ದಾರೆ. ಈ ಬಗ್ಗೆ ಇತ್ತೀಚಿನ ಕೆಲವು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಇದೀಗ ಮುಂದಿನ ವರ್ಷ ನಿರೂಪಕಿ ಅನುಶ್ರೀ ಮದುವೆಯಾಗುವುದು ಖಚಿತವಾಗಿದ್ದು, ದಿನಾಂಕ ಕೂಡ ಬಹುತೇಕ ನಿಗದಿಯಾಗಿದೆಯಂತೆ.
ಇದು ಅನುಶ್ರೀ ಮದುವೆ ಬಗ್ಗೆ ಯಾರೋ ಏನೋ ನೀಡಿರುವ ಹೇಳಿಕೆಯಲ್ಲ ಸ್ವತಃ ಅನುಶ್ರೀಯೇ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಒಂದು ಸಿಕ್ರೇಟ್ ಅನ್ನು ಬಹಿರಂಗ ಪಡಿಸಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರನ್ನು ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್ ಗೆ ಅತಿಥಿಗಳನ್ನಾಗಿ ಕರೆದು ಚಿಟ್ ಚಾಟ್ ನಡೆಸಿದ್ದರು. ಈ ವೇಳೆ ಅನುಶ್ರೀ ಚೆನ್ನಾಗಿ ಕೂತಿದ್ದೀರಾ ಕಂಡ್ರೋ ಮದುವೆ ಆಗಿರುವವರು ಒಂದೆಡೆ, ಮದುವೆ ಆಗದೆ ಇರೋರು ಮತ್ತೊಂದೆಡೆ ಎಂದು ಕಾಲೆಳೆದರು.
ಮದುವೆ ಬಗ್ಗೆ ಮಾತಾಡಿದಕ್ಕೆ ಉತ್ತರಿಸಿದ ನಟ ಗಿಲ್ಲಿ, ನಾವು ಬೇರೆ ಬೇರೆ ಕುಳಿತಿದಿದ್ದೇವೆ. ಮಧ್ಯದಲ್ಲಿ ಕುಳಿತ ನೀವೂ ಮದುವೆಗೆ ರೆಡಿ ಆಗಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎಂದಿದ್ದಾರೆ. ಈ ವೇಳೆ ಸೂರಜ್ ಬಹುಶಃ ಮುಂದಿನ ಫೆಬ್ರವರಿಗೆ ಅನುಶ್ರೀ ಅವರ ಮದುವೆ ಇರಬಹುದು ಎಂದಿದ್ದಾರೆ. ಆಗ ಇಲ್ಲ ಕಣ್ರೋ ನಾನು ಅಪ್ಪು ಸರ್ ಫ್ಯಾನ್ ಆಗಿರೋದ್ರಿಂದ ಮಾರ್ಚ್ನಲ್ಲಿ ಎಂದು ಅನುಶ್ರೀ ರಾಗ ಎಳೆದಿದ್ದಾರೆ.