Kiccha Sudeep:(ಅ.20) ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಇಂದು (ಅಕ್ಟೋಬರ್ 20) ಮುಂಜಾನೆ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: 💠ಮಡಂತ್ಯಾರು : ಸಮಾಜ ಸೇವಕ ಕೆ.ಮೋಹನ್ ಕುಮಾರ್ ಅವರಿಗೆ “ಜೆಸಿಐ ಸಪ್ತಾಹ ಪುರಸ್ಕಾರ”
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಸುದೀಪ್ ಅವರ ತಾಯಿಯನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ಇಂದು ಮುಂಜಾನೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಅವರು ಬೆಳಿಗ್ಗೆ 7 ಗಂಟೆಗೆ ನಿಧನ ಹೊಂದಿದ್ದಾರೆ.
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಮಂಗಳೂರು ಮೂಲದವರಾಗಿದ್ದರು. ತುಳು ಅವರ ಮಾತೃಭಾಷೆಯಾಗಿತ್ತು. ಈ ಬಗ್ಗೆ ಸುದೀಪ್ ಹಿಂದೆ ಹೇಳಿಕೊಂಡಿದ್ದರು.