Makeup kit: (ಅ.20) ಹೆಣ್ಮಕ್ಕಳ ಪ್ರೀತಿಯ ಸಂಗಾತಿ ಮೇಕಪ್ ಕಿಟ್. ಸೌಂದರ್ಯದ ಗುಟ್ಟನ್ನು ಹುದುಗಿಟ್ಟುಕೊಂಡಿರುವ ಈ ಕಿಟ್‌ನಲ್ಲಿ ಅಂದದ ಹೆಣ್ಣಿಗೆ ಮತ್ತಷ್ಟು ಚೆಂದ ಕಾಣಲು ಏನೆಲ್ಲಾ ಬೇಕೋ ಅವೆಲ್ಲವೂ ಬಚ್ಚಿಟ್ಟುಕೊಂಡಿರುತ್ತದೆ. ವಿಷಯ ಅದಲ್ಲ, ಒಬ್ಬರು ಬಳಸಿದ ಮೇಕಪ್ ಐಟಂಗಳನ್ನು ಇನ್ನೊಬ್ಬರು ಬಳಸಬಹುದಾ ಅನ್ನೋದು!
ಇದನ್ನೂ ಓದಿ: 🟠ದೀಪಾವಳಿ ಹಬ್ಬ ಆಚರಿಸಲು ಅಕ್ಟೋಬರ್ 31 ಅಥವಾ ನವೆಂಬರ್ 1 ರಲ್ಲಿ ಯಾವುದು ಶುಭ ದಿನ?
ಸಾಮಾನ್ಯವಾಗಿ ಮೇಕಪ್ ಹಂಚಿಕೊಳ್ಳಲು ಯಾರೂ ಸಲಹೆ ನೀಡಲ್ಲ. ವಿಶೇಷವಾಗಿ ನಿಮ್ಮ ಕಣ್ಣುಗಳು, ತುಟಿಗಳು ಅಥವಾ ಲೋಳೆಯ ಪೊರೆಗಳೊಂದಿಗೆ ಸಂಪರ್ಕಕ್ಕೆ ಬರುವ ಐಟಂಗಳಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಸ್ಟೈ, ಪಿಂಕ್ ಐ ಮತ್ತು ಶೀತ, ಹುಣ್ಣುಗಳಂತಹ ಸೋಂಕುಗಳಿಗೆ ಕಾರಣ ಆಗಬಹುದು. ಮತ್ತೊಬ್ಬರು ಬಳಸಿದ ವಸ್ತುಗಳನ್ನು ಯೂಸ್ ಮಾಡೋದ್ರಿಂದ ನಿಮ್ಮ ಚರ್ಮಕ್ಕೆ ಸೂಕ್ತವಾಗದಿದ್ದರೆ ಮೊಡವೆಗಳಿಗೂ ದಾರಿ ಮಾಡಿ ಕೊಡುತ್ತದೆ ಎನ್ನುತ್ತಾರೆ ತಜ್ಞರು.
ಬ್ಯಾಕ್ಟಿರಿಯಾ: ಮೇಕಪ್ ವಸ್ತುಗಳಿಂದ ಬ್ಯಾಕ್ಟೀರಿಯಾಗಳು ಶೇಖರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಅವುಗಳನ್ನು ಮುಚ್ಚದೆ ಅಥವಾ ತೆರೆದಿದ್ದರೆ.
ಕಣ್ಣುಗಳು: ಕಣ್ಣಿನ ಮೇಕಪ್ ಐಟಂಗಳಾದ ಮಸ್ಕರಾ, ಐಲೈನರ್ ಮತ್ತು ಕಾಜಲ್ ಹಂಚಿಕೊಳ್ಳುವುದು ಕಣ್ಣಿನ ಸೋಂಕುಗಳಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ಅಂಟಿಕೊಳ್ಳಬಹುದು.
ತುಟಿಗಳು: ಲಿಪ್‌ಸ್ಟಿಕ್ ಅಥವಾ ತುಟಿಗೆ ಹಚ್ಚುವ ಬಣ್ಣವನ್ನು ಹಂಚಿಕೊಳ್ಳುವುದು ಕೂಡ ಅಪಾಯಕಾರಿ. ಇದರಿಂದಲೂ ಬ್ಯಾಕ್ಟೀರಿಯಾಗಳು ಹರಡುತ್ತವೆ.
ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು : ಬೇರೆಯವರ ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು ಎಷ್ಟು ಸ್ವಚ್ಛವಾಗಿವೆ ಎಂದು ತಿಳಿಯುವುದು ಕಷ್ಟ. ಮೇಕಪ್ ಹಂಚಿಕೊಳ್ಳುವ ಬದಲು ನೀವು ಸ್ವಂತ ಮೇಕಪ್ ಹೊಂದಿರೋದು ಒಳ್ಳೆಯದು.