Wed. Nov 20th, 2024

Bigg Boss 11: ತಾಯಿ ಬಗ್ಗೆ ಕೀಳಾಗಿ ಮಾತಾಡಿದ ಚೈತ್ರಾ!! – ಹಿಂದೂ ಫೈರ್‌ ಬ್ರ್ಯಾಂಡ್‌ ನ ಗ್ರಹಚಾರ ಬಿಡಿಸಿದ ಕಿಚ್ಚ!!

Bigg Boss 11: (ಅ.20) ಭಾರೀ ಚರ್ಚೆ ಹುಟ್ಟುಹಾಕಿರುವ “ಬಿಗ್ ಬಾಸ್​ ಕನ್ನಡ ಸೀಸನ್​ 11” ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರು ಗುಡುಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಅವರು ಅನೇಕ ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾನುವಾರ (ಅಕ್ಟೋಬರ್​ 20) ಕೂಡ ಕಿಚ್ಚನ ಕ್ಲಾಸ್ ಮುಂದುವರಿಯಲಿದೆ.

ಇದನ್ನೂ ಓದಿ: 🛑Viral Video: ಹುಡುಗರೇ ಪ್ಲೀಸ್‌ ಕ್ಲೀನ್‌ ಶೇವ್‌ ಮಾಡಿ!!

ಈ ವಾರ ಮಾತನಾಡುವ ಭರದಲ್ಲಿ ಚೈತ್ರಾ ಕುಂದಾಪುರ ಅವರ ಅಸಭ್ಯವಾದ ಪದಗಳನ್ನು ಬಳಕೆ ಮಾಡಿದ್ದರು. “ಒಬ್ಬ ಅಪ್ಪನಿಗೆ ಹುಟ್ಟಿದವನಾಗಿದ್ದರೆ..’ ಎಂದು ಜಗದೀಶ್​ಗೆ ಚೈತ್ರಾ ಹೇಳಿದ್ದರು. ಅದೇ ವಿಚಾರವನ್ನು ಇಟ್ಟುಕೊಂಡು ಸುದೀಪ್​ ಅವರು ಚೈತ್ರಾಗೆ ಗ್ರಹಚಾರ ಬಿಡಿಸಿದ್ದಾರೆ.

ಲಾಯರ್ ಜಗದೀಶ್ ಅವರು ಬಿಗ್​ ಬಾಸ್​ ಮನೆಯಲ್ಲಿ ಹಂಸಾ ಬಗ್ಗೆ ಮಾತನಾಡುವಾಗ ಅವಾಚ್ಯ ಪದಗಳನ್ನು ಬಳಸಿದ್ದರು. ಅದನ್ನು ಇಡೀ ಮನೆಯೇ ಖಂಡಿಸಿತ್ತು. ರಂಜಿತ್ ಅವರಂತೂ ಈ ವಿಚಾರಕ್ಕೆ ಜಗದೀಶ್ ಮೇಲೆ ಕೈ ಮಾಡಿ ಮನೆಯಿಂದ ಹೊರಬಂದಿದ್ದಾರೆ.

ಜಗದೀಶ್ ಮಾಡಿದ ತಪ್ಪಿಗೆ ಅವರನ್ನು ಕೂಡ ಮನೆಯಿಂದ ಹೊರಗೆ ಕಳಿಸಲಾಗಿದೆ. ಜಗದೀಶ್ ಮಾತನಾಡಿದ್ದು ತಪ್ಪು ಎಂಬುದಾದರೆ ಇನ್ನುಳಿದ ಸದಸ್ಯರ ಮಾತು ಮತ್ತು ವರ್ತನೆ ಸರಿಯಿದೆಯಾ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಆ ರೀತಿ ಮಾತನಾಡಬೇಡಿ ಅಂತ ನೀವು ಹೇಳುತ್ತೀರಿ. ಹೌದಲ್ಲವೇ? ಅದಕ್ಕೆ ನಾನು ತುಂಬಾ ಗೌರವಿಸುತ್ತೇನೆ. ಆದರೆ ಮಹಿಳೆಯರು ಕೂಡ ಪುರುಷರನ್ನು ಗೌರವಿಸಬಾರದಾ? ನಿಮ್ಮಿಂದ ಒಂದು ಮಾತು ಬರುತ್ತದೆ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ. ನೀವು ಕೂಡ ಅವರ ತಾಯಿಗೆ ತಾನೇ ಬೈದಿದ್ದು. ಇದು ಹೇಗೆ ಸಾಧ್ಯ? ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ಹೇಳಿದಾಗ ಯಾವ ನನ್ಮಗನೂ ಅಪ್ಪನಿಗೆ ಬೈಯ್ಯುತ್ತಿಲ್ಲ. ತಾಯಿಗೆ ಬೈಯುತ್ತಾ ಇರೋದು. ಹೆಣ್ಮಕ್ಕಳಿಗೆ ಗೌರವ ಕೊಡಿ ಅಂತ ನೀವು ಹೇಳ್ತೀರಾ?’ ಎಂದು ಸುದೀಪ್ ಅವರು ಖಡಕ್​ ಆಗಿ ಪ್ರಶ್ನಿಸಿದ್ದಾರೆ.

ಜಗದೀಶ್ ಅವರನ್ನು ಕೆಣಕಿದ ಉಗ್ರಂ ಮಂಜು ಅವರನ್ನು ಕೂಡ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಹಂಸಾ ಮಾಡಿದ ರಾಜಕೀಯವನ್ನು ಸಹ ಕಿಚ್ಚ ಖಂಡಿಸಿದ್ದಾರೆ. ‘ಹಾಗಂತ ನಾನು ಇಲ್ಲಿ ಜಗದೀಶ್ ಅವರನ್ನು ಬೆಂಬಲಿಸುತ್ತಿಲ್ಲ. ನೀವು ಸರಿ ಇದ್ದೀರಾ ಅಂತ ಕೇಳುತ್ತಿದ್ದೇನೆ’ ಎಂದು ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *