Wed. Nov 20th, 2024

Belthangadi: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಸಲುವಾಗಿ ವಿಶೇಷ ಸಮಾಲೋಚನಾ ಸಭೆ

ಬೆಳ್ತಂಗಡಿ:(ಅ.21) ಜಗಜ್ಜನನಿ ಕಾಪುವಿನ ಶ್ರೀ ಮಾರಿಯಮ್ಮ ವಿಶ್ವವ್ಯಾಪಿಯಾಗಿ ನೆಲೆಸಿರುವ ಭಕ್ತರನ್ನು ಅನುಗ್ರಹಿಸುವುದಕ್ಕಾಗಿ ರಜತ ರಥವೇರಿ ಬಂದು ಸ್ವರ್ಣಗದ್ದುಗೆಯೇರುವ ಅಭೂತಪೂರ್ವ ಸನ್ನಿವೇಶಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ.

ಇದನ್ನೂ ಓದಿ: 🟠Kokkada: ಮದುವೆಗೂ ಮುನ್ನ ಮತದಾನ ಮಾಡಿ ಎಲ್ಲರಿಗೂ ಮಾದರಿಯಾದ ಮದುಮಗ..!

ಪವಾಡ ಸದೃಶ ರೀತಿಯಲ್ಲಿ ಬೆಳಗುತ್ತಿರುವ ಕಾಪು ಮಾರಿಯಮ್ಮನ ಕ್ಷೇತ್ರದ ಸಾನಿಧ್ಯ ವೃದ್ದಿಗಾಗಿ ನವ ವಿಧದ ಧಾರ್ಮಿಕ ವಿಧಿ – ವಿಧಾನಗಳು ನಡೆಯಲಿದ್ದು, ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಯಾಗವೂ ಇದರಲ್ಲೊಂದಾಗಿದೆ.

ಹೊಸಮಾರಿಗುಡಿ ನವದುರ್ಗಾ ಲೇಖನ ಯಜ್ಞ ಸಮಿತಿ ಯ ಜಿಲ್ಲಾ ಸಂಚಾಲಕ ಚಂದ್ರಹಾಸ ಶೆಟ್ಟಿ ಹಾಗೂ ತಂಡ ಇಂದು ಬೆಳ್ತಂಗಡಿ ಸಮಿತಿ ಸದಸ್ಯರರುಗಳನ್ನು ಭೇಟಿ ಮಾಡಿ ವಿಶೇಷ ಸಮಾಲೋಚನಾ ಸಭೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಸಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಮುಖರು, ನವದುರ್ಗಾ ಲೇಖನ ಯಜ್ಞ ಸಮಿತಿ ಉಪಸ್ಥಿಯಲ್ಲಿ ಸಭೆ ನಡೆಯಿತು.

ನವದುರ್ಗಾ ಲೇಖನ ಯಜ್ಞ ಸಮಿತಿ ಬೆಳ್ತಂಗಡಿ ಸಂಚಾಲಕರಾದ ಕಿರಣ್ ಶೆಟ್ಟಿ ಬೆಳ್ತಂಗಡಿ ಸಹಸಂಚಾಲಕರು ಹಾಗೂ ತಾಲೂಕು ಮಹಿಳಾ ಸಮಿತಿಯ ಸಂಚಾಲಕರಾದ ಪುಷ್ಪಾವತಿ, ಪ್ರಮುಖರು ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕು ಸಂಚಾಲಕ ಕಿರಣ್ ಶೆಟ್ಟಿ ಸ್ವಾಗತಿಸಿ , ಸಹಸಂಚಾಲಕ ವಿಜಯ ಕುಮಾರ್ ಜೈನ್ ಅಳದಂಗಡಿ ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *