ಮಂಗಳೂರು :(ಅ.21) ಭಾರತದ ವಿವಿಧ ಭಾಗಗಳ ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಪಟ್ಟಿಯಲ್ಲಿ ಭಾನುವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನವೂ ಸೇರಿದೆ.
ಇದನ್ನೂ ಓದಿ: ⭕Chaitra Kundapura: ಕಿಚ್ಚನ ವಿರುದ್ದವೇ ನಾಲಿಗೆ ಹರಿಬಿಟ್ಟ ಫೈರ್ ಬ್ರ್ಯಾಂಡ್!!
ಮಧ್ಯಾಹ್ನ 12:35 ರ ಸುಮಾರಿಗೆ ಸ್ಕಿಜೋಫ್ರೇನಿಯಾ 111 ಎಂಬ ಖಾತೆಯಿಂದ ಟ್ವಿಟರ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಭಾರತದ ವಿವಿಧ ಭಾಗಗಳಲ್ಲಿ ಆರು ಏರ್ ಇಂಡಿಯಾ ವಿಮಾನಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಮಂಗಳೂರಿನ ಏರ್ ಇಂಡಿಯಾ ಸಿಬ್ಬಂದಿ ಮಧ್ಯಾಹ್ನ 1:30ರ ಸುಮಾರಿಗೆ ಈ ಸಂದೇಶವನ್ನು ಗಮನಿಸಿ ತಕ್ಷಣ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನಿಂದ ಬೆಳಗ್ಗೆ 9:30ಕ್ಕೆ ಹೊರಟಿದ್ದ ವಿಮಾನ ಮಧ್ಯಾಹ್ನ 1:30ಕ್ಕೆ ಸುರಕ್ಷಿತವಾಗಿ ದುಬೈಗೆ ಬಂದಿಳಿದಿದ್ದು, ಈ ವೇಳೆ ಉಗ್ರರು ಬಾಂಬ್ ಬೆದರಿಕೆ ಹಾಕಿದ್ದರು.
ಇನ್ನು ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.