ಬೆಳ್ತಂಗಡಿ:(ಅ.22) ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ಎಲ್ಲಾ ಸದಸ್ಯರು 100ಕ್ಕಿಂತ ಹೆಚ್ಚು ಸದಸ್ಯತ್ವ ನಡೆಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ, ಸಂಘಟನಾತ್ಮಕ ಸಾಧನೆಯನ್ನು ನಡೆಸಿದ ಇಡೀ ತಂಡಕ್ಕೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರು ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ⭕Chaitra Kundapura : “ನಾನು ಮದುವೆ ಫಿಕ್ಸ್ ಮಾಡ್ಕೊಂಡು ಬಂದಿದ್ದೀನಿ.!!
ಅಭಿಯಾನ ಯಶಸ್ವಿಯಾಗಲು ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ವಿಶೇಷ ಕಾಳಜಿ ವಹಿಸಿದ್ದಾರೆ
ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಂಡಲ ಯುವಮೋರ್ಚಾ ತಂಡದ ಪ್ರತಿಯೊಬ್ಬರೂ 100 ಕಿಂತ ಜಾಸ್ತಿ ಜನರನ್ನು ಬಿಜೆಪಿ ಸದಸ್ಯತ್ವ ಮಾಡಿಸಿದ್ದಾರೆ. ಹಾಗೂ ವಿಶೇಷವಾಗಿ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು 500 ಕ್ಕಿಂತ ಮೇಲ್ಪಟ್ಟು,
ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಗಳಾದ ಜಯಪ್ರಸಾದ್ ಕಡಮ್ಮಾಜೆ ಮೊಗ್ರು ಹಾಗೂ ವಿನೀತ್ ಕೋಟ್ಯಾನ್ ಸಾವ್ಯ ಇವರು 250 ಕ್ಕಿಂತ ಮೇಲ್ಪಟ್ಟು ಸದಸ್ಯತ್ವ ಮಾಡಿರುತ್ತಾರೆ.
ರಾಜ್ಯದಲ್ಲಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ವಿಶೇಷ ರೀತಿಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಮಾದರಿಯಾಗಿರುತ್ತದೆ.