Wed. Apr 16th, 2025

Udupi: ಲವ್ವರ್ ಜೊತೆ ಸೇರಿ ಕರಿಮಣಿ ಮಾಲೀಕ ನಿಗೆ ಇಟ್ಟಳು ಮುಹೂರ್ತ!!-ಗಂಡನಿಗೆ ಸ್ಲೋ ಪಾಯಿಸನ್ ಕೊಟ್ಟ ವಿಷಕನ್ಯೆ..!!!

Udupi:(ಅ.25) ಕಾರ್ಕಳ ತಾಲೂಕಿನ ಅಜೆಕಾರಿನ ಬಾಲಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಹಲವು ಮಾಹಿತಿಗಳು ಹೊರಬರುತ್ತಿದೆ. ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿ ಮಧ್ಯರಾತ್ರಿ ಬಾಲಕೃಷ್ಣರ ಮುಖಕ್ಕೆ ಬೆಡ್‌ಶೀಟ್‌ ಒತ್ತಿ ಹಿಡಿದು ಕೊಲೆ ಮಾಡಿರುವ ಮಾಹಿತಿ ವರದಿಯಾಗಿದೆ.

ಅಜೆಕಾರು ಮರ್ಣೆ ಗ್ರಾಮದ ಬಾಲಕೃಷ್ಣ (44) ಕೊಲೆ ಪ್ರಕರಣದಲ್ಲಿ ಪತ್ನಿ ಪ್ರತಿಮಾ, ಪ್ರಿಯಕರ ದಿಲೀಪ್‌ ಹೆಗ್ಡೆ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಸಪ್ತಪದಿ ತುಳಿದು, ಏಳೇಳು ಜನ್ಮಕ್ಕೂ ನೀನೇ ನನ್ನ ಗಂಡ ಎಂದು ಪ್ರಮಾಣ ಮಾಡಿ ಮನೆಗೆ ಬಂದ ಪತ್ನಿಯಿಂದಲೇ ಬಾಲಕೃಷ್ಣ ಅವರು ಕೊಲೆಯಾಗಿರುವುದು ದುರದೃಷ್ಟಕರ ಸಂಗತಿ.

ಅಷ್ಟಕ್ಕೂ ಪ್ರತಿಮಾಗೆ ದಿಲೀಪ್‌ ಹೆಗ್ಡೆ ಪರಿಚಯವಾಗಿದ್ದು ಹೇಗೆ?

ಅಜೆಕಾರಿನ ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ಪ್ರತಿಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಳು. ಗಂಡನೊಂದಿಗೆ ರೀಲ್ಸ್‌ ಮಾಡಿಕೊಂಡು ಇದ್ದ ಈಕೆಗೆ ಇನ್ಸ್ಟಾಗ್ರಾಂ ನಲ್ಲಿ ಕಾರ್ಕಳದ ದಿಲೀಪ್‌ ಹೆಗ್ಡೆ ಪರಿಚಯವಾಗಿದೆ.

ಪರಿಚಯದಿಂದ ಸ್ನೇಹ, ನಂತರ ಅನೈತಿಕ ಸಂಬಂಧದವರೆಗೆ ಹೋಗಿತ್ತು. ತಮ್ಮ ಈ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಇಬ್ಬರು ಮಾತಾಡಿಕೊಂಡು ಬಾಲಕೃಷ್ಣ ಕೊಲೆ ಮಾಡಬೇಕೆಂದು ಸಂಚು ಮಾಡಿದ್ದಾರೆ.

ನಂತರ ನಡೆದದ್ದೇ ಇವರ ರೋಚಕ ಪ್ಲ್ಯಾನ್‌. ದಿಲೀಪ್‌ ಹೆಗ್ಡೆ ವಿಷ ಪದಾರ್ಥ ತಂದಿದ್ದ, ಅದನ್ನು ಬಾಲಕೃಷ್ಣ ಊಟದಲ್ಲಿ ಸೇರಿಸಿ ಕೊಡು ಎಂದು ಹೇಳಿದ್ದ. ಆಕೆ ಅದರಂತೆ ಮಾಡಿ ಊಟದಲ್ಲಿ ಸೇರಿಸಿ ಹಲವು ಬಾರಿ ನೀಡಿದ್ದಾರೆ. ನಂತರ ಬಾಲಕೃಷ್ಣನ ಅನಾರೋಗ್ಯ ಹದಗೆಟ್ಟಿದೆ.

ಹದಗೆಟ್ಟು ಹಲವು ಆಸ್ಪತ್ರೆಗೆ ಸೇರಿಸಿದರೂ ಗುಣವಾಗದ ಕಾರಣ ಕೊನೆಯ ಬಾರಿ ಎಂಬಂತೆ ಅ.20 ರಂದು ಗಂಡನನ್ನು ಮುಗಿಸುವ ಆಲೋಚನೆ ಮಾಡಿದ್ದಾಳೆ. ಅದಕ್ಕಾಗಿ ದಿಲೀಪ್‌ ಹೆಗ್ಡೆಯನ್ನು ಮನೆಗೆ ಬರಲು ಹೇಳಿದ್ದಾಳೆ.

ಮಧ್ಯರಾತ್ರಿ ಅ.20 ರಂದು 1.30ರ ಸುಮಾರಿಗೆ ಪ್ರತಿಮಾ ಮನೆಗೆ ಬಂದಿದ್ದ ದಿಲೀಪ್‌ ಹೆಗ್ಡೆ ಪ್ರತಿಮಾ ಜೊತೆ ಸೇರಿ ಬೆಡ್‌ಶೀಟನ್ನು ಬಾಲಕೃಷ್ಣ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇವರ ಪ್ಲಾನ್ ಕೇಳಿ ಪೊಲೀಸರೇ ಒಮ್ಮೆ ಶಾಕ್ ಆಗಿದ್ದಾರೆ.

Leave a Reply

Your email address will not be published. Required fields are marked *