ಪುತ್ತೂರು:(ಅ.26) ಉಪನ್ಯಾಸಕರು ಪಾಠ ಮಾಡುತ್ತಿರುವಾಗಲೇ ಕ್ಲಾಸ್ ರೂಂಗೆ ನುಗ್ಗಿ ನಾಗರ ಹಾವೊಂದು ಹೆಡೆ ಬಿಚ್ಚಿದ ಘಟನೆ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದಿದೆ.

ವಿದ್ಯಾರ್ಥಿಗಳು ಕ್ಲಾಸ್ ರೂಂ ನಲ್ಲಿ ವಿದ್ಯಾಭ್ಯಾಸದಲ್ಲಿ ಮಗ್ನವಾಗಿರುವ ಸಂದರ್ಭ ಏಕಾಏಕಿ ನಾಗರಹಾವಿನ ಮರಿಯೊಂದು ಕ್ಲಾಸ್ ರೂಂ ಗೆ ನುಗ್ಗಿದೆ. ನಾಗರ ಹಾವನ್ನು ಕಂಡು ವಿದ್ಯಾರ್ಥಿಗಳು ಒಮ್ಮೆ ಬೆಚ್ಚಿ ಬಿದ್ದಿದ್ದಾರೆ.


ಬಳಿಕ ಉರಗ ತಜ್ಞರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ತೇಜಸ್ ನಾಗರಹಾವಿನ ಮರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.


