ಕಾರ್ಕಳ:(ಅ.27) ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ವೊಂದು ದೊರಕಿದೆ. ಅದೇನೆಂದರೆ ಅಸ್ವಸ್ಥರಾಗಿದ್ದ ಬಾಲಕೃಷ್ಣ ಪೂಜಾರಿ (44) ಇವರನ್ನು ಸ್ಲೋ ಪಾಯಿಸನ್ ನೀಡಿ, ಮುಖಕ್ಕೆ ಬೆಡ್ಶೀಟ್ ಒತ್ತಿ ಕ್ರೂರವಾಗಿ ಕೊಲೆ ಮಾಡಿದ ಪತ್ನಿ ಪ್ರತಿಮಾ (38) ಹಾಗೂ ದಿಲೀಪ್ ಹೆಗ್ಡೆ ಬಂಧನವಾಗಿದೆ.
ಇದನ್ನೂ ಓದಿ: ⭕ಕಲ್ಲಡ್ಕ: ಕಲ್ಲಡ್ಕದ ಕೆ.ಟಿ ಹೋಟೆಲ್ ನಲ್ಲಿ ಕಳವು..!
ಆತ್ಮ ಶುದ್ಧೀಕರಣ ವೇಳೆ ಸತ್ಯ ಹೊರಗೆ ಬಂದಿದೆ. ಮೃತ ಬಾಲಕೃಷ್ಣ ಆತ್ಮವು, ಸಂಬಂಧಿ ದೇಹವನ್ನು ಒಳ ಹೊಕ್ಕಿದೆ ಎನ್ನುವ ಚರ್ಚೆ ಆಗುತ್ತಿದೆ. ಆತ್ಮವೇ ಸತ್ಯ ಬಯಲಿಗೆಳೆದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಬಾಲಕೃಷ್ಣ ಅವರ ಆತ್ಮವೇ ಸತ್ಯ ಬಾಯಿ ಬಿಡಿಸಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹೆಂಡತಿಯ ಬಾಯಿಯಲ್ಲಿ ಸತ್ಯ ನುಡಿಸಿದೆ ಎಂಬ ಚರ್ಚೆ ಭಾರೀ ಜೋರಾಗಿದೆ. ಬಾಲಕೃಷ್ಣ ಅವರು ಸತ್ತ ದಿನವೇ ಪೋಸ್ಟ್ಮಾರ್ಟಂ ಮಾಡಲು ಹೇಳಲಾಗಿತ್ತು. ಬಾಲಕೃಷ್ಣ ಅವರ ಮರಣದ ಐದು ದಿನದ ನಂತರ ಕಾರ್ಯಕ್ರಮ ನಡೆಯುತ್ತದೆ. ಆ ಸಮಯದಲ್ಲಿ ಗ್ರಾಮಸ್ಥರು, ಕುಟುಂಬಸ್ಥರು ಸೇರಿದ ಸಂದರ್ಭದಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಾ, ಎರಡು ಗಂಟೆಯೊಳಗೆ ನಮಗೆ ಸತ್ಯ ಗೊತ್ತಾಗಲೇ ಬೇಕು ಎಂದು ಹೇಳುತ್ತಾರೆ.
ಕೂಡಲೇ ಆ ಸಮಯದಲ್ಲಿ ಆರೋಪಿ ಪ್ರತಿಮಾ ಳ ಅಣ್ಣ ತಂಗಿ ಮನೆಯೊಳಗೆ ಹೋಗಿ, ನಿಜ ಹೇಳು, ನೀನು ಏನು ಮಾಡಿದ್ದೀ? ಎಂದು ಕೇಳಿದಾಗ, ಮೊದಲಿಗೆ ಅಲ್ಲಗೆಳೆದ ಪ್ರತಿಮಾ ನಂತರ ಒಮ್ಮೆಲೇ ಅವನು (ದಿಲೀಪ್) ಬಂದು ಕೊಲೆ ಮಾಡಿ ಹೋಗಿದ್ದು, ನನ್ನದು ತಪ್ಪಾಯಿತು, ಕ್ಷಮಿಸು ಎಂದು ಅಳುತ್ತಾ ಹೇಳಿದ್ದಾಳೆ. ಇದನ್ನೆಲ್ಲ ಅಣ್ಣನ ಬಳಿ ವಿವರವಾಗಿ ಹೇಳಿದ್ದಾಳೆ. ಬಾಲಕೃಷ್ಣ ಮೃತ ಹೊಂದಿದ ರಾತ್ರಿ ನಡೆದ ಎಲ್ಲಾ ಘಟನೆಯನ್ನು ಬಾಯಿಬಿಟ್ಟಿದ್ದಾಳೆ.
ಈ ಮೂಲಕ ಬಾಲಕೃಷ್ಣ ಮೃತ ಹೊಂದಿದ ಐದು ದಿನಕ್ಕೆ ಸತ್ಯ ಬಾಯಿ ಬಿಟ್ಟ ಪ್ರತಿಮಾ. ಹೀಗಾಗಿ ಗ್ರಾಮಸ್ಥರು ಇದು ಬಾಲಕೃಷ್ಣನ ಆತ್ಮವೇ ಈ ಮೂಲಕ ಸತ್ಯ ಹೊರಗೆ ಬರುವ ಹಾಗೆ ಮಾಡಿದೆ ಎಂದು ಚರ್ಚೆ ಮಾಡುತ್ತಿದ್ದಾರೆ. ಪ್ರತಿಮಾಳೇ ಪಾಯಿಸನ್ ಹಾಕಿ ಕೊಂದದ್ದು ಎಂಬ ಬಲವಾದ ನಂಬಿಕೆ ನಮಗೆ ಇತ್ತು, ಆತ (ದಿಲೀಪ್) ಕೂಡಾ ಬಂದು ಕೊಲೆ ಮಾಡಿದ್ದಾನೆ ಎನ್ನುವ ಸಂಶಯ ಕೂಡಾ ನಮಗೆ ಇರಲಿಲ್ಲ ಎನ್ನುವ ಮಾತು ಬಾಲಕೃಷ್ಣ ಅವರ ಸ್ನೇಹಿತರು ಮಾಧ್ಯಮಕ್ಕೆ ಹೇಳಿದ್ದಾರೆ.