ಮೇಷ ರಾಶಿ: ಇಂದು ಯಾವ ನಿರ್ಧಾರವನ್ನೂ ಸ್ವತಂತ್ರವಾಗಿ ಮಾಡುವುದು ಕಷ್ಟ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ನಿಮಗೆ ದೂರದಲ್ಲಿರುವ ಮಕ್ಕಳನ್ನು ಕಾಣದೇ ಬೇಸರವಾಗಲಿದೆ. ಕಾನೂನಿಗೆ ವಿರುದ್ಧವಾದ ಮಾರ್ಗದಲ್ಲಿ ಹಣಸಂಪಾದನೆಯನ್ನು ಮಾಡುವ ಯೋಚನೆ ಬರುವುದು. ನಿಮ್ಮ ಉದ್ಯಮದಕ್ಕೆ ಸೂಕ್ತವಾದ ವ್ಯಕ್ತಿಗಳನ್ನು ಸೇರಿಸಿಕೊಳ್ಳಿ. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಯನ್ನು ಗಳಿಸುವಿರಿ. ಸಂಗಾತಿಯ ನಿಲುವನ್ನು ಬೆಂಬಲಿಸುವಿರಿ. ತಾಳ್ಮೆಯಿಂದಲೇ ಮಾತನಾಡಿ. ಬಾಕಿ ಉಳಿದ ಕಛೇರಿಯ ಕಾರ್ಯಗಳನ್ನು ಮಾಡುವಿರಿ.
ವೃಷಭ ರಾಶಿ: ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕೆಂದರೂ ಆಗದು. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಕುಟುಂಬದಲ್ಲಿ ಅನಿರೀಕ್ಷಿತ ತಿರುವು ಬರಲಿದೆ. ಅನಾರೋಗ್ಯದಿಂದ ಕಷ್ಟಪಡುವಿರಿ. ಬೇರೆಯವರಿಗೆ ಕೊಡುವ ಹಣವು ನಿಮ್ಮ ಕೈಸೇರುವುದು. ಇಂದಿನ ಕೆಲಸವನ್ನು ಬೇಗ ಮುಗಿಸಿ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಇಟ್ಟುಕೊಂಡಿದ್ದು ಅದನ್ನು ಬದಲಿಸಿ. ನಿಮ್ಮ ವಿವಾಹಕ್ಕಾಗಿ ಬಂಧುಗಳು ಪ್ರಯತ್ನಿಸುವರು. ವೈದ್ಯ ವೃತ್ತಿಯಲ್ಲಿ ನಿಮಗೆ ನಿರೀಕ್ಷಿತ ಆದಾಯ ಬಲ ಸಿಗದು.
ಮಿಥುನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಕಾಲ ಕೂಡಿಬರದು. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಖರೀದಿಯನ್ನು ಮಾಡುವಿರಿ. ಸಂತಾನದ ಬಯಕೆಯನ್ನು ಹಂಚಿಕೊಳ್ಳುವಿರಿ. ಮನೆಯಲ್ಲಿ ನಿಮಗೆ ಕಾರ್ಯಬಾಹುಲ್ಯವಿರುವುದು. ಬಳಕೆಯಾದ ವಾಹನವನ್ನು ಖರೀದಿಸುವಿರಿ. ತೆಗೆದುಕೊಂಡ ಹಣವನ್ನು ಪಡೆಯಲು ನಿಮಗೆ ಕಷ್ಟವಾದೀತು. ಸ್ಥಿರಾಸ್ತಿಯ ವಿಚಾರಕ್ಕೆ ನೀವು ಕಾನೂನಿಗೆ ಶರಣಾಗುವಿರಿ. ಸರ್ಕಾರಿ ಉದ್ಯೋಗಕ್ಕೆ ನಿಮ್ಮ ಶ್ರಮ ಸಾಕೆನಿಸಬಹುದು.
ಕರ್ಕಾಟಕ ರಾಶಿ: ವ್ಯಾಪಾರ ವಹಿವಾಟಿನಲ್ಲಿ ನಿಮಗೆ ನೇರವಾಗಿ ಭಾಗವಹಿಸಲಾಗದು. ನಿಮ್ಮ ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಮಾಹಿತಿಯ ಕೊರತೆಯಿಂದ ತಪ್ಪಾದ ಕೆಲಸಕ್ಕೆ ಪಶ್ಚಾತ್ತಾಪ ಪಡುವಿರಿ. ನಿಮಗೆ ಗೌರವವು ಸಿಗದ ಕಡೆ ನೀವು ಹೋಗಲು ಇಷ್ಟಪಡುವುದಿಲ್ಲ. ದೂರ ಪ್ರಯಾಣವು ನಿಮ್ಮಿಂದ ವಿಶ್ರಾಂತಿಯನ್ನು ಕೇಳುವುದು.
ಸಿಂಹ ರಾಶಿ: ಎಂತಹ ಏಕಾಂತವೂ ನಿಮ್ಮ ಮನಸ್ಸಿಗೆ ಕಿರಿಕಿರಿ ತರುವುದು. ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನಪಟ್ಟುಕೊಳ್ಳುವಿರಿ. ನಿದ್ರೆಯಲ್ಲಿ ಕಂಡ ಕನಸಿನಿಂದ ಭೀತರಾಗುವಿರಿ. ನಿಮಗೆ ಸಂಪತ್ತು ಯಾರಿಗಾದರೂ ದಾನ ಮಾಡಬೇಕು ಎಂದು ಅನ್ನಿಸುವುದು. ರಾಜಕೀಯವಾದ ಒತ್ತಡವು ನಿಮ್ಮ ಮೇಲೆ ಬರಲಿದೆ. ಸಭ್ಯತೆಯನ್ನು ಉಳಿಸಿಕೊಂಡು ವ್ಯವಹರಿಸುವುದು ಕಷ್ಟವಾಗುವುದು. ನಿಮ್ಮ ಸಾಮರ್ಥ್ಯವನ್ನು ನೀವಾಗಿಯೇ ತೋರಿಸುವುದು ಬೇಡ.
ಕನ್ಯಾ ರಾಶಿ: ಸ್ಥಿರಾಸ್ತಿಯ ಬಗ್ಗೆ ಗೊಂದಲ ಉಂಟಾಗುವುದು. ಅಧಿಕಾರಿಗಳಿಗೆ ಬೇಕಾದುದನ್ನು ನೀಡಿ ಅವರನ್ನು ಸಂತೋಷಪಡಿಸುವಿರಿ. ಈ ದಿನದ ಆರಂಭದಲ್ಲಿಯೇ ನಿಮ್ಮಲ್ಲಿ ಉತ್ಸಾಹದ ಕೊರತೆಯು ಕಾಣಿಸುವುದು. ಯಾರದೋ ವಿಚಾರಕ್ಕೆ ನೀವು ಸಮಯವನ್ನು ಕೊಡಬೇಕಾಗುವುದು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಸಲ್ಲಿಸಿ. ವಿದೇಶದಲ್ಲಿ ಇರುವವರ ಬಗ್ಗೆ ಚಿಂತೆ ಇರಲಿದೆ. ಉದ್ಯೋಗದ ಕಾರಣಕ್ಕೆ ಮನೆಯಿಂದ ದೂರ ಇರುವಿರಿ. ಅನಧಿಕೃತ ಮಾಹಿತಿಯನ್ನು ಪಡೆದು ಯಾವ ಕೆಲಸಕ್ಕೂ ಮುಂದಾಗಬೇಡಿ.
ತುಲಾ ರಾಶಿ: ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ತಂದೆಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ವಾಹನ ಸಂಚಾರವು ಕಡಿಮೆ ಇರಲಿ. ನಿಮ್ಮ ನಿರ್ಣಯಕ್ಕೆ ವಿರುದ್ಧವಾಗಿ ಯಾರಾದರೂ ಮಾತನಾಡಬಹುದು. ಸಂಗಾತಿಯ ಜೊತೆ ಅನಗತ್ಯ ವಸ್ತುಗಳ ಖರೀದಿಯ ಕಾರಣದಿಂದ ಕಲಹವಾಗಲಿದೆ. ಮಿತ್ರರಿಂದ ಆಗದ ಕಾರ್ಯವನ್ನು ಅಪರಿಚಿತರು ಮಾಡುವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಫಲಾಪೇಕ್ಷೆ ಇಲ್ಲದೇ ಶ್ರದ್ಧೆಯಿಂದ ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗುವಿರಿ.
ವೃಶ್ಚಿಕ ರಾಶಿ: ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಜಾಗೂ ಜಯ ಸಿಗುವುದು. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ದಾಂಪತ್ಯದ ಸಮಸ್ಯೆಯು ನ್ಯಾಯಾಲಯದವರೆಗೂ ಹೋಗಬಹುದು. ಪರಸ್ಪರ ಬಗೆ ಹರಿಸಿಕೊಳ್ಳುವುದು ಕ್ಷೇಮ. ಅಧಿಕಾರಕ್ಕೆ ತಕ್ಕ ಹಿಡಿತವು ನಿಮ್ಮಲ್ಲಿ ಇರದು.ನೀವು ಏಕಾಂಗಿ ಎಂಬ ಮನೋಭಾವವು ಬರಲಿದೆ. ಇನ್ನೊಬ್ಬರ ಬಳಿ ಇದ್ದ ಸ್ಥಿರಾಸ್ತಿಯನ್ನು ನೀವು ಪಡೆದುಕೊಳ್ಳುವಿರಿ. ಸರ್ಕಾರಿ ಸೌಲಭ್ಯಗಳು ನಿಮಗೆ ನಿಮ್ಮ ಪ್ರಯತ್ನದ ಫಲವಾಗಿ ಸಿಗಲಿದೆ.
ಧನು ರಾಶಿ: ನಿಮಗಾದ ಅಪಮಾನಕ್ಕೆ ಸಮಯವನ್ನು ಕಾಯುವಿರಿ. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು.ಅಪರಿಚಿತರು ಆಪ್ತರೆಂದು ಬರಬಹುದು. ನಿಮ್ಮದೇ ಸತ್ಯವೆಂದು ವಾದಿಸುವುದು ಸರಿಯಾಗದು. ಬಂಧುಗಳ ಜೊತೆ ಔಚಿತ್ಯಪೂರ್ಣವಾದ ಮಾತುಗಳನ್ನು ಆಡಿ. ನಿಮ್ಮ ವೈಫಲ್ಯವನ್ನು ಸರಿ ಮಾಡಿಕೊಳ್ಳಿ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ.
ಮಕರ ರಾಶಿ: ಕಟ್ಟಡಗಳ ನಿರ್ಮಾಣ ಮಾಡುವವರಿಗೆ ಇಂದು ಬೇಕಾದುದು ಜರುಗುವುದು. ಇಂದು ನಿಮ್ಮ ವಿವಾಹದ ಇಚ್ಛೆಯನ್ನು ಮನೆಯಲ್ಲಿ ಹೇಳುವಿರಿ. ದಾಂಪತ್ಯದಲ್ಲಿ ಪ್ರೀತಿಯು ಕಡಿಮೆ ಆಗಬಹುದು. ಹೊಸ ಉದ್ಯೋಗದ ಸ್ಥಳವು ನಿಮಗೆ ಉತ್ಸಾಹವನ್ನು ಕೊಡುವುದು. ಹೊಸ ಸ್ನೇಹ ಬಳಗವನ್ನೂ ಕಟ್ಟಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ನಿಮಗೆ ಸಿಗಲಿದೆ. ಪ್ರಯಾಣವನ್ನು ಎಲ್ಲರ ಒತ್ತಾಯದಿಂದ ನಿಲ್ಲಿಸುವಿರಿ.
ಕುಂಭ ರಾಶಿ: ಇಂದು ಅಪರಿಚಿತ ವ್ಯಕ್ತಿಗಳಿಂದ ಕರೆ ಬರಬಹುದು. ನಿಮ್ಮ ಸ್ವತಂತ್ರ ಯೋಚನೆಯಿಂದ ಯಶಸ್ಸು ಸಿಗಲಿದೆ.ಮನೆಯ ವಾತಾವರಣವು ಸಂತೋಷವನ್ನು ಕೊಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಇಂದು ನಿಮಗಾಗುವ ಕಾರ್ಯವನ್ನು ಬಿಡದೇ ಮಾಡಿಸಿಕೊಳ್ಳುವಿರಿ. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಮನಸ್ಸು ಬಹಳ ಚಂಚಲವಾಗುವುದು. ಕೇಳಿದವರಿಗೆ ಸಹಾಯವನ್ನು ಮಾಡುವಿರಿ.
ಮೀನ ರಾಶಿ: ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮಗೆ ಹತಾಶೆ ಕಾಣಿಸುವುದು. ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಅನ್ಯ ಮಾರ್ಗದಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸರ್ಕಾರದ ಕೆಲಸವನ್ನು ಒತ್ತಡದಿಂದ ಮಾಡಿಸಿಕೊಳ್ಳುವಿರಿ. ಸಾಲವಾಗಿ ಯಾರಿಗೂ ಹಣವನ್ನು ಕೊಡುವುದು ಬೇಡ. ದುರಭ್ಯಾಸವನ್ನು ರೂಢಿಸಿಕೊಳ್ಳಲಿದ್ದೀರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಇಂದು ಮಾಡಬೇಕು ಎಂದುಕೊಂಡ ಕೆಲಸವನ್ನು ಮುಂದೂಡುವಿರಿ. ಎಂತಹ ಸಂದರ್ಭ ಬಂದರೂ ದುಡ್ಡನ್ನು ನೀವಾಗಿಯೇ ಕೊಡಲಾರಿರಿ.