ಪುತ್ತೂರು:(ಅ.28) ಕಾಂಗ್ರೇಸ್ ಮುಖಂಡ ಬಿ.ಕೆ ಹರಿಪ್ರಸಾದ್ ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂಬ ಹೇಳಿಕೆಯನ್ನು ಹಿಂದೂ ಸಮಾಜ ತೀವ್ರ ಖಂಡಿಸುತ್ತದೆ.
ಇದನ್ನೂ ಓದಿ: ⚖Aries to Pisces: ಮಕರ ರಾಶಿಯವರು ಹೊಸ ಸ್ನೇಹ ಬಳಗವನ್ನು ಕಟ್ಟಿಕೊಳ್ಳುವಿರಿ!!!
ಈ ರೀತಿಯ ಹೇಳಿಕೆಗಳನ್ನು ನೀಡಿ ಸಂಪ್ರದಾಯ ಮತ್ತು ನಂಬಿಕೆಗಳಿಗೆ ದ್ರೋಹ ಎಸಗುತ್ತಿರುವ ಬಿ.ಕೆ ಹರಿಪ್ರಸಾದ್ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಸೂಕ್ತ.
ಪೂರ್ವಾಗ್ರಹ ಪೀಡಿತರಾಗಿ ಈ ರೀತಿಯಾಗಿ ಮಾತನಾಡಿ ಸಮಾಜದಲ್ಲಿ ಶಾಂತಿ ಕೆದಡುವ ಪ್ರಯತ್ನವಿದು. ಹಿಂದೂ ಸಮಾಜಕ್ಕೆ ಪ್ರಾತಸ್ಮರಣೀಯರಾಗಿರುವ ಶ್ರೀಗಳಿಗೆ ಈ ರೀತಿಯ ಹೇಳಿಕೆ ನೀಡಿರುವುದು ಸಮಸ್ತ ಹಿಂದೂ ಸಮಾಜಕ್ಕೆ ಮಾಡಿರುವ ಅವಮಾನ.
ಬಿ.ಕೆ. ಹರಿಪ್ರಸಾದ್ ಸ್ವಾಮಿಜೀಯವರಲ್ಲಿ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಮುಂದೆ ನಡೆಯುವ ಎಲ್ಲಾ ಬೆಳವಣಿಗೆಗಳಿಗೆ ಅವರೇ ಕಾರಣರಾಗುತ್ತಾರೆಂದು ಈ ಮೂಲಕ ತಿಳಿಸುತ್ತೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.