Wed. Nov 20th, 2024

Belthangadi : ಬೆಳ್ತಂಗಡಿ ತಾಲೂಕು ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ಅಡುಗೆ ನೌಕರರ ಪ್ರತಿಭಟನೆ – ವೇತನ ಹೆಚ್ಚಳ, ಬಾಕಿ ವೇತನ ಪಾವತಿಸಲು ಒತ್ತಾಯ – ನವೆಂಬರ್ 07 ರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅಡುಗೆ ಬಂದ್ ಎಚ್ಚರಿಕೆ!!

ಬೆಳ್ತಂಗಡಿ :(ಅ.28) ವೇತನ ಹೆಚ್ಚಳ ಮಾಡಲು ಮತ್ತು 3 ತಿಂಗಳ ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ಅಡುಗೆ ನೌಕರರ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ: 🟣ಉಜಿರೆ: ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ


ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಜವಾಬ್ದಾರಿಯಿಂದ ನಡೆಯುವ ಈ ಅಕ್ಷರದಾಸೋಹ ಯೋಜನೆಯ ಕೆಲಸಗಾರರ ಈ ಕೆಳಗಿನ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಿ ರಕ್ಷಿಸಬೇಕು, ಒಂದು ವಾರದ ಒಳಗೆ ಬಾಕಿ ಇರುವ ಎಲ್ಲಾ ವೇತನ ಬಾರದೇ ಇದ್ದರೆ ನವೆಂಬರ್ 07 2024 ರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅಡುಗೆ ಬಂದ್ ಮಾಡಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಬಾಗ ಅನಿರ್ಧಿಷ್ಟ ಕಾಲ ಸಂಬಳ ಸಿಗುವ ತನಕ ಧರಣಿ ಸತ್ಯಾಗ್ರಹ ನಡೆಸಲು ನಾವು ನಿರ್ಧರಿಸಿರುತ್ತೇವೆ ಎಂದು ತಮ್ಮ ಗಮನಕ್ಕೆ ತರುತ್ತಿದ್ದೇವೆ.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ನಮ್ಮ ಹಕ್ಕೊತ್ತಾಯಗಳು ಮತ್ತು ಬೇಡಿಕೆಗಳು: ಕಳೆದ 3 ತಿಂಗಳಿಂದ ದುಡಿದ ವೇತನ ಬಾರದೆ ಕಷ್ಟ ಪಡುತ್ತಿದ್ದೇವೆ. ಕೊಡುವ ಮಾಸಿಕ ಕೇವಲ ರೂ. 3,600 ಸಂಬಳವನ್ನೂ ಈ ರೀತಿ ನೀಡದೆ, ಸತಾಯಿಸುವುದು, ಮಾನವ ಹಕ್ಕುಗಳ ಉಲ್ಲಂಘನೆಯೂ, ದುಡಿಮೆ ತಕ್ಕ ವೇತನ ನೀಡದ ಅನ್ಯಾಯವೂ ಆಗುತ್ತದೆ.

ತಕ್ಷಣ ನಮ್ಮ ಎಲ್ಲಾ ಬಾಕಿ ಸಂಬಳವನ್ನು ಬಿಡುಗಡೆ ಮಾಡಬೇಕು, ನಿರಂತರ ಬೆಲೆ ಏರಿಕೆ ಆಗುತ್ತಿದ್ದರು ಅಕ್ಷರದಾಸೋಹ ನೌಕರರಿಗೆ ವೇತನ ಹೆಚ್ಚಳ ಮಾಡಿರುವುದಿಲ್ಲ, ಕೂಡಲೇ ಕನಿಷ್ಠ ರೂ15,000 ಮಾಸಿಕ ವೇತನ ನೀಡಬೇಕು, ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆ ಎಂದಿದೆ.

ನಾವು ದಿನಕ್ಕೆ 6 ಗಂಟೆಗೆ ಹೆಚ್ಚು ಕೆಲಸ ಮಾಡುವುದರಿಂದ ಅದನ್ನು 6 ಗಂಟೆ ಎಂದು ಬದಲಾಯಿಸಬೇಕು, ಅಕ್ಷರದಾಸೋಹ ಯೋಜನೆಯನ್ನು ಸಂಪೂರ್ಣ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಸಬೇಕು, ಸಾದ್ವಿಲಾರು ಜಂಟಿ ಖಾತೆಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್.ಡಿ.ಎಂ.ಸಿ. ಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸಾಗಬೇಕು, ಸಾದ್ವಿಲಾರು ಖಾತೆ ಮೊದಲಿನಂತೆಯೇ ಬದಲಾಯಿಸಬೇಕು, ಇಡುಗಂಟು ಕೊಡುವ ಯೋಜನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕಿಯೂ ಇನ್ನೂ ಜಾರಿಯಾಗಿಲ್ಲ ತಕ್ಷಣ ಜಾರಿ ಮಾಡಬೇಕು.


ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ಯಾವುದೇ ಸ್ವರೂಪದ ಜವಾಬ್ದಾರಿ ನೀಡಬಾರದು.
ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ರಾಜ್ಯ,ಕೇಂದ್ರ ಸರಕಾರಗಳ ಬಡವರ ವಿರೋಧಿ, ಕಾರ್ಮಿಕ ವಿರೋಧಿ ಮಹಿಳಾ ವಿರೋಧಿ ಆಡಳಿತ ವೈಖರಿಯನ್ನು ಟೀಕಿಸಿ ಬಿಸಿಯೂಟ ಅಡುಗೆ ನೌಕರರ ಬೇಡಿಕೆಗಳು ಕೂಡಲೇ ಈಡೇರದಿದ್ದಲ್ಲಿ ನವೆಂಬರ್ 7ರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅಡುಗೆ ಬಂದ್ ಮಾಡಿ ತಾಲೂಕು ಕಚೇರಿ ಎದುರು ಅನಿರ್ದಿಷ್ಟ ಕಾಲ ಸಂಬಳ ಸಿಗುವವರೆಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕರು,ಮಂತ್ರಿಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡಲು ಹಣವಿದೆ, ಕಾಳಜಿಯೂ ಇದೆ, ಬಡ ಮಹಿಳೆಯರ ಬಿಸಿಯೂಟ ನೌಕರರ ಸಂಬಳ ಕೊಡಲು ಹಣವೂ ಇಲ್ಲ, ಸಮಯವೂ ಇಲ್ಲ, ಕಾಳಜಿಯೂ ಇಲ್ಲ ಎಂದು ಟೀಕಿಸಿ ಆಕ್ರೋಶ ವ್ಯಕ್ಥಪಡಿಸಿದರು. ಹಿರಿಯ ಮುಖಂಡರಾದ ಜಯರಾಮ ಮಯ್ಯ, ದಲಿತ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಸಮತಿ ಸದಸ್ಯೆ ಈಶ್ವರಿ, ಶಂಕರ್ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *