Wed. Nov 20th, 2024

Hassan: ಇದಲ್ವಾ ಪವಾಡ ಅಂದ್ರೆ – ಸುರಿವ ಮಳೆ ನಡುವೆಯೂ ಹಾಸನಾಂಬ ಸನ್ನಿಧಿಯಲ್ಲಿ ಆರದ ನಂದಾದೀಪ!!

ಹಾಸನ:(ಅ.29) ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯದಲ್ಲಿ ಪವಾಡವೇ ನಡೆದಿದೆ. ಸುರಿಯುವ ಮಳೆಯಲ್ಲಿಯೂ ದೀಪ ಪ್ರಜ್ವಲಿಸಿದೆ.

ಇದನ್ನೂ ಓದಿ: ⭕ಅಜೆಕಾರು: ಅಜೆಕಾರು ಮರ್ಡರ್‌ ಕೇಸ್‌

ಮಳೆ ಸುರಿಯುತ್ತಿದ್ದರೂ ದೇವಾಲಯದಲ್ಲಿ ದೀಪ ಉರಿಯುತ್ತಿತ್ತು. ಹಾಸನಾಂಬೆ ದೇವಾಲಯದ ಮುಂದೆ ಹಚ್ಚಿಟ್ಟಿರುವ ದೀಪ ಜೋರಾಗಿ ಮಳೆ ಬರುತ್ತಿದ್ದರೂ ಆರದೆ ಪ್ರಜ್ವಲಿಸುತ್ತಿತ್ತು.

ಅ. 24ರಂದು ಹಾಸನಾಂಬ ದೇವಾಲಯ ಬಾಗಿಲು ತೆರೆಯಲಾಗಿದ್ದು, ಅ. 25ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 11 ದಿನಗಳ ಕಾಲ ದೇವಾಲಯದ ಬಾಗಿಲು ತೆರೆದರೂ ಮೊದಲ ದಿನ ಮತ್ತು ಅಂತಿಮ ದಿನವಾದ ನವೆಂಬರ್ 3ರಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. 9 ದಿನದೊಳಗೆ ದರ್ಶನ ಮಾಡಬೇಕಿದೆ.

ರೈಲು, ಬಸ್, ಬಾಡಿಗೆ, ಸ್ವಂತ ವಾಹನದಲ್ಲಿ ರಾಜ್ಯ, ಹೊರ ರಾಜ್ಯವಲ್ಲದೇ, ವಿದೇಶದಿಂದಲೂ ಭಕ್ತರು ಆಗಮಿಸಿ, ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *