Wed. Nov 20th, 2024

Bigg Boss -11 : ಗೌತಮಿ ಮಲಗಿದ್ದಾಗ ಧನರಾಜ್‌ ಆಚಾರ್‌ ಮಾಡಿದ್ದೇನು ಗೊತ್ತಾ?! – ಜಿಂಕೆಮರಿಗೆ ವಾರ್ನಿಂಗ್‌ ಕೊಟ್ಟ ಗೌತಮಿ!!

ಬಿಗ್‌ ಬಾಸ್‌ 11 :(ಅ.31) ‘ಸತ್ಯ’ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪಾಸಿಟಿವ್ ಮನಸ್ಥಿತಿಯಿಂದ ಗಮನ ಸೆಳೆದಿದ್ದಾರೆ. ಆದರೆ ವಿವಾದಗಳೇ ತುಂಬಿರುವ ದೊಡ್ಮನೆಯಲ್ಲಿ ಪಾಸಿಟಿವಿಟಿ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೂಗಾಡಬೇಕಾಗುತ್ತದೆ.

ಇದನ್ನೂ ಓದಿ: ⚖Daily Horoscope: ಧನು ರಾಶಿಯವರು ಖಾಸಗಿ ಸಂಸ್ಥೆಯ ಅಧಿಕಾರಿಯಾಗುವ ಸಂಭವ!!

ಕಿರಿಕಿರಿ ಆದಾಗ ನಗು ಬದಿಗಿಟ್ಟು ಜಗಳ ಮಾಡಲೇಬೇಕಾಗುತ್ತದೆ. 31 ನೇ ದಿನ ಬೆಳ್ಳಂಬೆಳಗ್ಗೆಯೇ ಗೌತಮಿ ಅವರಿಗೆ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಧನರಾಜ್. ಹೌದು, ಧನರಾಜ್​ ಅವರ ಒಂದು ವರ್ತನೆಯನ್ನು ಗೌತಮಿ ಖಂಡಿಸಿದ್ದಾರೆ.

ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ, ಬೆಳಗ್ಗೆ ಹಾಡು ಪ್ಲೇ ಆದ ತಕ್ಷಣ ಎಲ್ಲ ಸ್ಪರ್ಧಿಗಳು ಏಳಬೇಕು. ಸಾಮಾನ್ಯವಾಗಿ ಈ ರೀತಿ ಹಾಡು ಹಾಕಿದಾಗ ಎಲ್ಲರೂ ಎದ್ದು ಡ್ಯಾನ್ಸ್ ಮಾಡುತ್ತಾರೆ. ಆದರೆ 31ನೇ ದಿನ ಹಾಡು ಪ್ಲೇ ಆದಾಗ ಗೌತಮಿ ಅವರು ಇನ್ನೂ ಬೆಡ್​ ಬಿಟ್ಟು ಎದ್ದಿರಲಿಲ್ಲ. ಇನ್ನೇನು ಅವರು ಏಳಬೇಕು ಎಂಬಷ್ಟರಲ್ಲಿ ಧನರಾಜ್ ಅವರು ದಿಂಬಿನಿಂದ ಗೌತಮಿಗೆ ಹೊಡೆದರು. ಅದು ಗೌತಮಿ ಅವರಿಗೆ ಕಿರಿಕಿರಿ ಉಂಟು ಮಾಡಿತು.

‘ನನಗೆ ಇದು ಇಷ್ಟ ಆಗಲಿಲ್ಲ. ಮೊದಲ ದಿನ ಅಂತ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಈ ರೀತಿ ಎಬ್ಬಿಸಬೇಡಿ. ಸಾಂಗ್ ಬಂದಾಗ ಏಳಬೇಕು ಎಂಬುದು ನನಗೆ ಕೂಡ ಗೊತ್ತು’ ಎಂದು ಗೌತಮಿ ಅವರು ಗರಂ ಆಗಿ ಹೇಳಿದ್ದಾರೆ.

ಯಾವಾಗಲೂ ಪಾಸಿಟಿವಿಟಿ ಜಪ ಮಾಡುವ ಗೌತಮಿ ಅವರು ಇಷ್ಟು ಖಡಕ್ ಆಗಿ ವಾರ್ನಿಂಗ್ ನೀಡಿದ್ದು ಕಂಡು ಧನರಾಜ್ ಅವರಿಗೆ ಅಚ್ಚರಿ ಆಯಿತು. ಕೆಲವು ನಿಮಿಷಗಳ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಘಟನೆ ಬಳಿಕ ಧನರಾಜ್ ಮತ್ತು ಗೌತಮಿ ನಡುವೆ ಮೊದಲಿನ ಆತ್ಮೀಯತೆ ಉಳಿಯದೇ ಇರಬಹುದು.

Leave a Reply

Your email address will not be published. Required fields are marked *