Wed. Nov 20th, 2024

Puttur: ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದ ಮಹಿಳೆ – ಶೋಭಾಕ್ಕನ ಸಾಹಸಕ್ಕೆ ಜನರಿಂದ ಮೆಚ್ಚುಗೆ!!

ಪುತ್ತೂರು:(ನ.4) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶವೊಂದರಲ್ಲಿ ಮಹಿಳೆಯೊಬ್ಬರು ಬೃಹತ್ ಗಾತ್ರದ ಹೆಬ್ಬಾವೊಂದನ್ನು ಹಿಡಿದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: ⭕ಬೆಂಗಳೂರು: ಗುರುಪ್ರಸಾದ್ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸಾವಿನ ಅಸಲಿ ಸತ್ಯ!!

ಗಂಡಸಿಗೂ ಇರದ ಧೈರ್ಯ ಆ ವೀರ ಮಹಿಳೆ ಶೋಭಕ್ಕ ಎಂಬವರು ಹೆಬ್ಬಾವನ್ನ ಹಿಡಿಯುವ ಮೂಲಕ ತೋರಿಸಿ ಕೊಟ್ಟಿದ್ದಾರೆ.

ಈ ಹೆಬ್ಬಾವಿಗೆ “ಇಂಡಿಯನ್ ರಾಕ್ ಪೈತಾನ್” ಎಂದು ಎಂದು ಕರೆಯಲಾಗುತ್ತೆ. ಸದ್ಯ ಕರಾವಳಿ ಭಾಗದಲ್ಲಿ ಈ ಹೆಬ್ಬಾವಿಗೆ “ಕೋಳಿ ಮರ್ಲೆ” ಎಂಬ ತುಳು ಪದವನ್ನು ಬಳಸಲಾಗುತ್ತೆ.

ಶೋಭ ಅವರು ಹೆಬ್ಬಾವನ್ನು ಹಿಡಿಯುವ ಸಂದರ್ಭ ಯಾವುದೇ ಭಯವಿಲ್ಲದೆ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ಸಾಹಸಿ ವೀಡಿಯೋ ಇದೀಗ ಕರಾವಳಿ ಭಾಗದಲ್ಲಿ ಭಾರೀ ವೈರಲ್ ಆಗಿದೆ.

ಆದ್ರೆ ಹೆಬ್ಬಾವನ್ನು ನೋಡಲು ಬಂದಿದ್ದ ಅದೆಷ್ಟೋ ಮಂದಿ ಹಿಡಿಯಲು ಮುಂದಾಗಿಲ್ಲ. ಬದಲಾಗಿ ಅಲ್ಲೇ ಇದ್ದ ಮುಸ್ಲಿಂ ಸಹೋದರ ಬಶೀರ್ ಎಂಬವರಲ್ಲಿ ಗೋಣಿ ಹಿಡಿಯಿರಿ ಎಂದು ತುಳು ಭಾಷೆಯಲ್ಲಿ ಶೋಭಾಕ್ಕ ಹೇಳಿದಾಗ ಸಹಾಯಕ್ಕೆ ಬಂದಿದ್ದಾರೆ.

ಆದ್ರೆ ಬಶೀರ್ ಅವ್ರು ಕೂಡ ಹೆಬ್ಬಾವನ್ನು ಮುಟ್ಟಲು ಧೈರ್ಯವಿಲ್ಲದೆ ಹಿಂದೆ ಸರಿದಿದ್ದಾರೆ. ಕೊನೆಗೆ ಶೋಭಾ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *