Wed. Nov 20th, 2024

Belthangady : ಭಜಕ ಮಹಿಳೆಯರ ಬಗ್ಗೆ ನಿಂದನೆ – ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ, ಬೀದಿಗಿಳಿದು ಆಕ್ರೋಶ..!

ಬೆಳ್ತಂಗಡಿ :(ನ.4)ಮಹಿಳಾ ಭಜಕರ ಬಗ್ಗೆ ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಹಾಗೂ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ವಿರುದ್ದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು.

ಭಜನಾ ಪರಿಷತ್‌ ಬೆಳ್ತಂಗಡಿ,ಕುಣಿತ ಭಜನಾ ತರಬೇತಿದಾರರ ಸಂಘ, ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನ ಬಳಿಯಿಂದ ಖಂಡನಾ ಮೆರವಣಿಗೆ ಮತ್ತು ಬೆಳ್ತಂಗಡಿ ಆಡಳಿತ ಸೌಧದ ಆವರಣದಲ್ಲಿ ಭಜಕರ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ನ್ಯಾಯವಾದಿಗಳಾದ ಸುಬ್ರಹ್ಮಣ್ಯ ಅಗರ್ತ, ನಮ್ಮ ದೇಶದಲ್ಲಿ ಬಹುಸಂಖ್ಯಾತರ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿ ಮಾಡಿದರು. ಕೇಳುವವರು ಇಲ್ಲದಂತೆ ಆಗಿದೆ. ಭಜನೆ ಎಂಬ ಸಂಸ್ಕೃತಿಯನ್ನು ನಿಲ್ಲಿಸಬೇಕು ಅನ್ನುವ ಯೋಚನೆ ಇರುವವರು ಅನೇಕರಿದ್ದಾರೆ.

ಅಂತವರು ಇಂತಹ ಕುಕೃತ್ಯದ ಹಿಂದೆ ಇದ್ದಾರೆ. ಭಜನೆಯಿಂದ ಮಾತೃ ಶಕ್ತಿ ಎಚ್ಚರಗೊಳ್ಳುತ್ತಿದೆ ಹಾಗೂ ಮನೆಯಿಂದ ಹೊರಬರುವಂತೆ ಆಗಿದೆ ಎಂದರು. ಸರ್ಕಾರಿ ಅಧಿಕಾರಿಯೊಬ್ಬ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಅಂದರೆ ಇದರ ಹಿಂದೆ ಒಂದು ನಿಗೂಢತೆ ಅಡಗಿದೆ. ಅದುವೇ ಹಿಂದೂ ಸಮಾಜದ ಮಾತೃಶಕ್ತಿ ಜಾಗೃತರಾಗಬಾರದು ಅನ್ನುವ ಉದ್ಡೇಶ.

ಭಜಕ ಶಕ್ತಿ ಜಾಗೃತರಾಗಬಾರದು ಅನ್ನುವ ಉದ್ದೇಶ. ಇದರ ಮೂಲಕ ದೇವರನ್ನು ಪ್ರಾರ್ಥನೆಯನ್ನು ತಡೆಯಬಹುದು ಅನ್ನುವ ಹುನ್ನಾರ ಇದೆ ಎಂದು ಅಗರ್ತ ಅವರು ಆರೋಪಿಸಿದರು. ಬಳಿಕ ಮಾತನಾಡಿದ ಹಿರಿಯ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ರವರು, ಭಜನೆ ಹಿಂದೂ ಧರ್ಮದ ಅಸ್ಮಿತೆಯಾಗಿದೆ, ಭಜನೆ ಕನಕ ದಾಸರು ಶ್ರೀ ಕೃಷ್ಣ ನನ್ನ ಒಲಿಸಿಕೊಂಡಿದ್ದರು. ಅಂತಹ ಭಜಕರನ್ನು ಇಂದು ಅವಮಾನ ಮಾಡಲಾಗಿದೆ. ಇದು ಅತ್ಯಂತ ಖೇದಕರ ಎಂದರು.

ತಪ್ಪು ಮಾಡಿದವನಿಗೆ ಶಿಕ್ಷೆ ಕೊಡಲಿ ಅಂತ ಸನಾತನಿಗಳಾದ ನಾವು ದೇವರ ಮೊರೆ ಹೋಗುತ್ತೇವೆ. ಹೀಗಾಗಿ ಭಜನೆ ಮೂಲಕ ದೇವರನ್ನು ಒಲಿಸುವ ಸನಾತನಿಗಳಿಗೆ ಅನ್ಯಾಯವಾಗಿದೆ. ಭಜಕರಿಗೆ ಆಗಿರುವ ಈ ಅನ್ಯಾಯಕ್ಕೆ ನೀನು ನ್ಯಾಯ ಒದಗಿಸು ಕೊಡು ಎಂದು ದೇವರ ಪ್ರಾರ್ಥನೆ ಮಾಡಿದರೆ ಸಾಕು ಬೇರೆ ಯಾವುದು ಅಗತ್ಯವಿಲ್ಲ ಅಂದರು.

ವೇದಿಕೆಯಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಪಿ ಸಾಲ್ಯಾನ್, ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್‌ ಭಟ್, ವಿ.ಹಿಂ. ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ರಾಷ್ಟ್ರ ಸೇವಿಕಾ ಸಮಿತಿಯ ಗಿರಿಜ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್,

ನ.ಪಂ ಅಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ಸೀತಾರಾಮ ಬೆಳಾಲು, ಕೊರಗಪ್ಪ ನಾಯ್ಕ, ಜಯಂತ್ ಗೌಡ, ಮಂಜುನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *